ಕೋಟದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ರಸ್ತೆ ಸುರಕ್ಷಾ ಜಾಗೃತಿ ಜಾಥ

0
66

ಕುಂದಾಪುರ ಮಿರರ್ ಸುದ್ದಿ…

ಕೋಟ: ಪ್ರಸ್ತುತ ದಿನಗಳಲ್ಲಿ ರಸ್ತೆ ಅವಗಡಗಳು ಹೆಚ್ಚುತ್ತಿವೆ ಇದಕ್ಕೆ ಕಾರಣ ಯುವ ಸಮುದಾಯದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಕೊರತೆಯೇ ಕಾರಣ ಎಂದು ಕುಂದಗನ್ನಡದ ರಾಯಬಾರಿ ಮನು ಹಂದಾಡಿ ಹೇಳಿದರು.

ಮಂಗಳವಾರ ಕೋಟದ ಮಾಂಗಲ್ಯ ಮಂದಿರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಉಪವಿಭಾಗ ಹಾಗೂ ಬ್ರಹ್ಮಾವರ ವೃತ್ತ,ಕೋಟ ಪೊಲೀಸ್ ಠಾಣೆ ಆಶ್ರಯದಲ್ಲಿ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಉಡುಪಿ ಜಿಲ್ಲಾ ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರಸಾದ ನೇತ್ರಾಲಯ ಉಡುಪಿ ಇವರ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟ ಇವರ ವತಿಯಿಂದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ ಯುವ ಸಮುದಾಯ ವಾಹನ ಸಂಚಾರಗೈಯುವಾಗ ಅತಿ ವೇಗದ ಚಲಾವಣೆಯಿಂದ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿದೆ ಇದರ ನಷ್ಟ ಮನೆಯವರಿಗೆ ಹೊರತು ಪೊಲೀಸ್ ಇಲಾಖೆಗಲ್ಲ ಪ್ರತಿಬಾರಿ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕಾರ್ಯ ಮಾಡಿಯೂ ಪುನಃ ಅದೇ ತಪ್ಪುಗಳು ನಡೆಯುತ್ತಿದೆ.ಇದರ ಬಗ್ಗೆ ಪೋಷಕರೇ ಜಾಗೃತಿ ವಹಿಸಿವ ಅಗತ್ಯತೆಗಳನ್ನು ಒತ್ತಿ ಹೇಳಿದ ಅವರು ಪೊಲೀಸ್ ಇಲಾಖೆಯ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯ ಅತ್ಯಂತ ಪ್ರಶಂಸನೀಯ, ಇತ್ತಿಚಿನ ವರ್ಷಗಳಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣ ದುರ್ಬಳಕೆ ಹೆಚ್ಚುತ್ತಿದೆ ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗುವುದು ಒಳಿತು ಎಂದು ಕುಂದಗನ್ನಡದಲ್ಲೆ ತಿಳಿ ಹೇಳುವ ಕಾರ್ಯ ಮಾಡಿದರು.

ಕಾರ್ಯಕ್ರಮವನ್ನು ಉಡುಪಿಯ ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಪ್ರಸಾದ್ ಉದ್ಘಾಟಿಸಿದರು.

Click Here

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ವಹಿಸಿ ಪೊಲೀಸ್ ಇಲಾಖೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅಭ್ಯಾಗತರಾಗಿ ಉಡುಪಿ ಪೊಲೀಸ್ ಇಲಾಖೆಯ ಡಿವೈಎಸ್ ಪಿ ಡಿ.ಟಿ ಪ್ರಭು, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ,ಕೋಟ ಪೊಲೀಸ್ ಠಾಣೆಯ ಅಪರಾಧ ದಳದ ಎಸ್.ಐ ಸುಧಾ ಪ್ರಭು, ಕೋಟ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ ಉಪಸ್ಥಿತರಿದ್ದರು.

ಕೋಟ ಠಾಣೆಯ ಪಿಎಸ್ ಐ ರಾಘವೇಂದ್ರ ಸ್ವಾಗತಿಸಿ ಪ್ರಾಸ್ತಾವನೆಗೈದರು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಚಂದ್ರಶೇಖರ್ ಬೀಜಾಡಿ ನಿರೂಪಿಸಿ ವಂದಿಸಿದರು.

ಈ ಮೊದಲು ರಸ್ತೆ ಸುರಕ್ಷಾ ಜಾಗೃತಿಯ ಅಂಗವಾಗಿ ಕೋಟ ಅಮೃತೇಶ್ವರಿ ಸರ್ಕಲ್ ಬಳಿಯಿಂದ ಜಾಗೃತಿ ಜಾಥ ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಚಾಲನೆ ನೀಡಿದರು. ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ,ಚಂದ್ರ ಆಚಾರ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಇದ್ದರು. ಜಾಥದಲ್ಲಿ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು, ಪಂಚವರ್ಣ ಸಂಘಟನೆ, ಅಮೃತ ಯುವಕ ಸಂಘ ಸೇರಿದಂತೆ ವಿವಿಧ ಸ್ಥಳೀಯ ಸಂಘಟನೆಗಳು ಭಾಗಿಯಾದವು,

Click Here

LEAVE A REPLY

Please enter your comment!
Please enter your name here