ಯಡಬೆಟ್ಟು ಯಕ್ಷ ಮಿತ್ರರು ಬಳಗದಿಂದ ಅದ್ಧೂರಿ ಯಕ್ಷರಾತ್ರಿ , ಸಾಧಕ ಈಶ್ವರ್ ಮಲ್ಪೆ ಟೀಮ್‍ಗೆ ಸನ್ಮಾನ ಕಾರ್ಯಕ್ರಮ

0
77

ಕುಂದಾಪುರ ಮಿರರ್ ಸುದ್ದಿ…

ಕೋಟ: ಕಲೆಯನ್ನು ಆರಾಧಿಸಿ ಅದನ್ನು ವೇದಿಕೆಯಾಗಿರಿಸಿಕೊಂಡು ಸಾಮಾಜಿಕ ಕೈಂಕರ್ಯ ನಿಜಕ್ಕೂ ಶ್ಲಾಘನೀಯ ಎಂದು ಯೋಗ ಗುರುಕುಲ ಇದರ ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಹೇಳಿದರು.

ಸೋಮವಾರ ಯಡಬೆಟ್ಟು ಹಗ್ರಿ ಪರಿಸರದಲ್ಲಿ ಯಕ್ಷಮಿತ್ರರು ಯಡಬೆಟ್ಟು ಸಾಸ್ತಾನ ಆಶ್ರಯದಲ್ಲಿ ಯಕ್ಷರಾತ್ರಿ ಅದ್ಧೂರಿಯ ಯಕ್ಷ ವೇದಿಕೆಯಲ್ಲಿ ಸಾಧಕ ಈಶ್ವರ್ ಮಲ್ಪೆ ಟೀಮ್ ನವರಿಗೆ ಸನ್ಮಾನಗೈದು ಮಾತನಾಡಿ ಸಮಾಜದ ಏಳುಬೀಳುಗಳಿಗೆ ಸ್ಪಂದಿಸುವ ವ್ಯಕ್ತಿಗಳನ್ನು ಗುರುತಿಸಬೇಕಾದ ಅಗತ್ಯತೆಗಳನ್ನು ಸಭೆಯಲ್ಲಿ ಒತ್ತಿ ಹೇಳಿದ ಅವರು ಈಶ್ವರ್ ಮಲ್ಪೆಯಂತ ವ್ಯಕ್ತಿಗಳು ಗ್ರಾಮ ಗ್ರಾಮಗಳಲ್ಲಿ ಹುಟ್ಟಿಕೊಳ್ಳಬೇಕು ತನ್ಮೂಲಕ ಗ್ರಾಮಗಳಲ್ಲಿ ಸಾಮಾಜಿಕ ಪ್ರಜ್ಞೆ ನೆಲೆಯೂರಲಿದೆ ಎಂದರು.

Click Here

ಇದೇ ವೇಳೆ ರಾಜ್ಯಮಟ್ಟದ ಹ್ಯಾಮರ್ ಸಾಧಕ ತನುಷ್ ಪೂಜಾರಿಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಸಾಸ್ತಾನದ ಬ್ರಹ್ಮಬೈದರ್ಕಳ ಗೋಳಿಗರಡಿ ಪಾತ್ರಿ ಶಂಕರ್ ಪೂಜಾರಿ, ಯಕ್ಷಮಿತ್ರರು ತಂಡದ ಗೌರವಾಧ್ಯಕ್ಷ ಕರಿಯ ದೇವಾಡಿಗ, ಅಧ್ಯಕ್ಷ ಗೋಪಾಲ ಮೆಂಡನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಿರೂಪಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಈ ಪ್ರಯುಕ್ತ ಸುಂಕದಕಟ್ಟೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಂಡಿತು. ವಿಶೇಷವಾಗಿ ಮೆರವಣಿಗೆ, ಗಣಪತಿ ಪೂಜಾ ಕಾರ್ಯಕ್ರಮಗಳು ನೆರವೆರಿತು.

Click Here

LEAVE A REPLY

Please enter your comment!
Please enter your name here