ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ರಿಂಗ್ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬದಿಯ ನದಿ ತೀರಕ್ಕೆ ಕಲ್ಲುಗಳನ್ನು ಸುರಿಯುತ್ತಿದ್ದ ಟಿಪ್ಪರ್ ತನ್ನ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ಖಾರ್ವಿಕೇರಿ ಸಮೀಪದ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.
ಖಾಸಗಿ ಕನ್ ಸ್ಟ್ರಕ್ಷನ್ ಗೆ ಸೇರಿದ ಕಂಪೆನಿಯೊಂದು ಕಾಮಗಾರಿ ನಡೆಸುತ್ತಿದ್ದು ರಿಂಗ್ ರೋಡ್ ವಿಸ್ತರಣಾ ಕೆಲಸ ಭರದಿಂದ ನಡೆಯುತ್ತಿದೆ. ಈ ಸಂದರ್ಭ ಘಟನೆ ನಡೆದಿದ್ದು, ಜೆಸಿಬಿ ಬಳಸಿ ಸತತ ಯತ್ನದ ಮೂಲಖ ಟಿಪ್ಪರನ್ನು ಮೇಲಕ್ಕೆ ಎತ್ತಲಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.