ಕುಂದಾಪುರ : ಜಮೀನು ನೋಂದಣಿಗೆ ಹೋಗಿ ಬಂದವಳು ಆತ್ಮಹತ್ಯೆ

0
1366

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಹೊಸದಾಗಿ ಖರೀದಿಸಿದ ಜಮೀನು ನೋಂದಣಿ ಮಾಡಲು ಹೋದ ಮಹಿಳೆಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಬಳ್ಕೂರಿನ ನಿವಾಸಿ, ಸಮೀಪದ ಪಾನಕದ ಕಟ್ಟೆ ಎಲ್ಲಿ ಹೇರ್ ಸೆಲೂನ್ ನಡೆಸುತ್ತಿದ್ದ ವಿನಯ್ ಭಂಡಾರಿ ಎಂಬುವರ ಪತ್ನಿ ಶ್ರುತಿ (33) ಎಂದು ಗುರುತಿಸಲಾಗಿದೆ.

Click Here

ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದರು. ಸಾಲಿಗ್ರಾಮದ ಮೂಲದ ಶೃತಿ ಬ್ರಾಹ್ಮಣರಾಗಿದ್ದು ಕಾಲೇಜು ಸಂದರ್ಭದಲ್ಲಿ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಪ್ರಸ್ತುತ ಬಳ್ಕೂರು ಸಮೀಪದ ಬಿಹೆಚ್ ಎಂಬಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿಗಳು ಬಳ್ಕೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಬಂದಿದ್ದರು

ಬಳಿಕ ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ಬಳ್ಕೂರು ಸಮೀಪದ ಹೊಳೆಯ ಬದಿಯಲ್ಲಿ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ ಹೊರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ ಸಂಜೆ ಮೃತ ದೇಹವನ್ನು ಮೇಲಕ್ಕೆತ್ತಿ ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here