ಕುಂದಾಪುರ :ಕುಂಭಾಶಿಯಲ್ಲಿ ವೆಂಕಟಲಕ್ಷ್ಮೀ ಟವರ್ಸ್(ವಸತಿ ಸಮುಚ್ಚಯ) ಉದ್ಘಾಟನೆ

0
507

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂಭಾಶಿಯಲ್ಲಿ ನೂತನವಾಗಿ ನಿರ್ಮಾಣವಾದ ವೆಂಕಟಲಕ್ಷ್ಮೀ ಟವರ್ಸ್ ಉದ್ಘಾಟನಾ ಕಾರ್ಯಕ್ರಮ ಜ.19ರಂದು ನಡೆಯಿತು.

ವೆಂಕಟಲಕ್ಷ್ಮೀ ಟವರ್ಸ್ ಉದ್ಘಾಟನೆ ನೆರವೇರಿಸಿದ ‘ಸಹಕಾರ ರತ್ನ’ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ನಾವು ನೀಡುವ ಸೇವೆಯ ಮೇಲೆ ಯಶಸ್ಸು ನಿರ್ಧರಿತವಾಗುತ್ತದೆ. ಚಂದ್ರಶೇಖರ ಐತಾಳರು ನಿರ್ಧರಿಸಿದಂತೆ ಉತ್ತಮ ವಸತಿ ಸಮುಚ್ಛಯ ನಿರ್ಮಾಣ ಮಾಡಿದ್ದಾರೆ. 5 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬದ ರೀತಿಯಲ್ಲಿ ನೆರವೇರಿಸಿದ್ದಾರೆ. ಈ ವಸತಿ ಸಮುಚ್ಛಯದಲ್ಲಿರುವ 128 ಕುಟುಂಬದವರ ಶ್ರೇಯೋಭಿವೃದ್ಧಿ ಕೂಡಾ ಅವರ ಆಶಯವೆನ್ನುವುದು ಸ್ಪಷ್ಟ. ಐತಾಳರು ದೊಡ್ಡ ಬಿಲ್ಡರ್ಸ್ ಆಗಿ ಮೂಡಿಬರಲಿ ಎಂದರು.

ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಿಶ್ರಾಂತ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಶುಭಾಶಂಸನೆಗೈದು, ದೇವರನ್ನು ಮರೆತ ಸಮಾಜಸೇವೆ, ಸಮಾಜವನ್ನು ಮರೆತ ದೇವರ ಸೇವೆ ಎರಡು ಅಪೂರ್ಣವಾಗುತ್ತದೆ. ಆ ನಿಟ್ಟಿನಲ್ಲಿ ಚಂದ್ರಶೇಖರ ಐತಾಳರ ಸೇವೆ ಶ್ಲಾಘನೀಯವಾದುದು. ಗ್ರಾಮೀಣ ಪ್ರದೇಶವಾದ ಕುಂಭಾಶಿಯ ಅಭಿವೃದ್ಧಿಗೆ ಈ ವಸತಿ ಸಮುಚ್ಛಯ ನಾಂದಿ ಹಾಡಿದೆ. ಕುಂಭಾಶಿ ದೇವಾಲಯಗಳ ನಾಡು. ದೇವಾಲಯಗಳ ನಡುವೆ ಈ ಭವ್ಯವಾದ ಸಮುಚ್ಚಯ ನಿರ್ಮಾಣವಾಗಿದೆ. ಈ ಊರಿನ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ ಎಂದರು.

ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ ಕೊಡ್ಗಿ ಮಾತನಾಡಿ, ಕ್ಲಪ್ತ ಸಮಯದಲ್ಲಿ ಉತ್ಕøಷ್ಟವಾದ ವಸತಿ ಸಮುಚ್ಛಯ ನಿರ್ಮಾಣವಾಗಿದೆ. ಇಂದಿನ ಅವಶ್ಯಕತೆ, ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ವಸತಿ ಸಮುಚ್ಛಯಗಳು ಮಹತ್ತರವಾಗುತ್ತದೆ ಎಂದರು.

Click Here

Click Here

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾದ ಪ್ರಸನ್ನಕುಮಾರ್ ಐತಾಳ್, ಪ್ರಧಾನ ಪುರೋಹಿತರಾದ ಕಜ್ಕೆ ರಾಮಕೃಷ್ಣ ಭಟ್, ಚೀಪ್ ಆರ್ಕಿಟೆಕ್ಟ್ ಎ.ಗೋಪಾಲ ಭಟ್ ಉಡುಪಿ, ಕುಂಭಾಶಿ ಗ್ರಾಮ ಪಂಚಾಯಿತಿಯ ಆನಂದ ಪೂಜಾರಿ, ಎಸ್.ಸಿ.ಡಿ.ಸಿ ಬ್ಯಾಂಕ್ ಆಡಳಿತ ನಿರ್ದೇಶಕ ಕೆ.ಗೋಪಾಲಕೃಷ್ಣ ಭಟ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ, ಎಸ್.ರಾಜು ಪೂಜಾರಿ, ಉದ್ಯಮಿ ಸುಬ್ರಾಯ ಭಟ್ ಹಾಸನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಗೆ ಚಿನ್ನದ ಕಡಗ ತೊಡಿಸಿ ಸನ್ಮಾನಿಸಲಾಯಿತು. ಚೀಪ್ ಆರ್ಕಿಟೆಕ್ಟ್ ಎ.ಗೋಪಾಲ ಭಟ್,ಎಸ್.ಸಿ.ಡಿ.ಸಿ ಬ್ಯಾಂಕ್ ಆಡಳಿತ ನಿರ್ದೇಶಕ ಕೆ.ಗೋಪಾಲಕೃಷ್ಣ ಭಟ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಲೆಕ್ಕಪರಿಶೋಧಕ ಪಿ.ನರೇಂದ್ರ ಪೈ ಮಂಗಳೂರು, ಸುಧಾಕರ ಹೆಗ್ಡೆ ಕುಂದಾಪುರ, ಹೋಟೇಲ್ ಉದ್ಯಮಿ ಕೆ.ನರಸಿಂಹಮೂರ್ತಿ ಬೆಂಗಳೂರು, ಉದ್ಯಮಿ ಹರಿಶ್ಚಂದ್ರ ಬುರಡೆ ಕುಂದಾಪುರ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶಂಕರನಾರಾಯಣ ಯಡಿಯಾಳ, ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪ್ರದೀಪ ಯಡಿಯಾಳ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಎಸ್.ವಿ ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವೆಂಕಟಲಕ್ಷ್ಮೀ ಬಿಲ್ಡರ್ಸ್ ಹಂಗಳೂರು ಇದರ ನಿರ್ದೇಶಕರು, ಮತ್ತು ಆಡಳಿತ ನಿರ್ದೇಶಕರಾದ ಶ್ರೀಮತಿ ಹೇಮಾವತಿ ಮತ್ತು ಚಂದ್ರಶೇಖರ್ ಐತಾಳ್ ಅತಿಥಿಗಳನ್ನು ಗೌರವಿಸಿ, ಸನ್ಮಾನಿಸಿದರು.

ವೆಂಕಟಲಕ್ಷ್ಮೀ ಟವರ್ಸ್ ನಿರ್ಮಾಣ ಕಾರ್ಯದಲ್ಲಿ ದುಡಿದವರನ್ನು ಗೌರವಿಸಲಾಯಿತು. ಮನಸ್ವಿನಿ ಹೊಳ್ಳ ಪ್ರಾರ್ಥನೆ ಮಾಡಿದರು. ವಿಜಯ ಕುಮಾರ್ ಅಡಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಂತ ಪದ್ಮನಾಭ ಐತಾಳ್, ವೆಂಕಟಲಕ್ಷ್ಮೀ ಟವರ್ಸ್ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದವರ ಪಟ್ಟಿ ವಾಚಿಸಿದರು. ಶ್ರೀಲಕ್ಷ್ಮೀ ರಾಮರಾಜ್ ವಂದಿಸಿದರು. ಪ್ರಾಂಶುಪಾಲರಾದ ಎನ್. ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.

ಬೆಳಿಗ್ಗೆ 9 ಗಂಟೆಯಿಂದ 11ರ ತನಕ ಸಂಗೀತ ರಸಮಂಜರಿ ನಡೆಯಿತು.

Click Here

LEAVE A REPLY

Please enter your comment!
Please enter your name here