ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ಪದವಿ ಕಾಲೇಜಿನಲ್ಲಿ ‘ರಿಯಾಕ್ಟ್ ಜಾವಾ ಸ್ಕ್ರಿಪ್ಟ್ ಪ್ಲೇಸ್ ಮೆಂಟ್’ ತರಬೇತಿ ಕಾರ್ಯಗಾರ

0
71

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು ಕೋಡ್ ಲ್ಯಾಬ್ ಸಿಸ್ಟಮ್ ಮಂಗಳೂರು ಇವರ ಸಹಯೋಗದೊಂದಿಗೆ ಯು.ಐ/ ಯು. ಎಕ್ಸ್ ಅಭಿರ್ವದ್ದಿ, ರಿಯಾಕ್ಟ್ ಜಾವಾ ಸ್ಕ್ರಿಪ್ಟ್ ವಿಷಯದ ಕುರಿತು ಒಂದು ವಾರದ ತರಬೇತಿ ಕಾರ್ಯಗಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಆಧುನಿಕ ಐ.ಟಿ ಔದ್ಯೋಗಿಕ ಕ್ಷೇತ್ರದಲ್ಲಿ ಬಾರಿ ಬೇಡಿಕೆ ಇರುವ ಕೌಶಲ್ಯಧಾರಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

Click Here

Click Here

ಸಾಫ್ಟ್ ವೆರ್ ಡೆವಲಪರ್ಸ್, ಪ್ಲೇಸ್ಮೆಂಟ್ ತರಬೇತಿದಾರರಾದ ಮೊಹಮ್ಮದ್ ಝಸೀಲ್, ಮಹಮ್ಮದ್ ಶಾಹಿದ್ ಮತ್ತು ಕಾರ್ತಿಕ್ ಎಚ್. ಎಸ್ ಮತ್ತು ಉಪ ಪ್ರಾಂಶುಪಾಲರು ಹಾಗೂ ಪ್ಲೇಸ್ಮೆಂಟ್ಆಫೀಸರ್ ಜಯಶೀಲ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ಲೇಸ್ಮೆಂಟ್ ಸಹ ಸಂಯೋಜಕರು ಹಾಗೂ ಇಂಗ್ಲಿಷ್ ಉಪನ್ಯಾಸಕರಾದ ರಾಜೇಶ್ವರಿ ಆರ್. ಶೆಟ್ಟಿ ಯವರು ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here