ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಸುಕಿನ ಜಾವ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿಂದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಪಾದಾಚಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಬುಧವಾರ ಬೆಳಿಗ್ಗೆ ಕುಂದಾಪುರದ ಬಸ್ರೂರು ಮೂರುಕೈ ಎಂಬಲ್ಲಿರುವ ನಿತ್ಯಾನಂದ ಕಾಂಪ್ಲೆಕ್ಸ್ ಸಮೀಪ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಕುಂದಾಪುರದ ವಡೇರ ಹೋಬಳಿ ಗ್ರಾಮದ ನಿವಾಸಿ ಸೋಮಯ್ಯ ಎಂದು ಗುರುತಿಸಲಾಗಿದೆ.
ಸೋಮಯ್ಯ ಅವರು ಬುಧವಾರ ಬೆಳಗ್ಗೆ ಸುಮಾರು 5-30ರ ಹೊತ್ತಿಗೆ ವಾಕಿಂಗ್ ಗೆ ಬಿ.ಸಿ.ರೋಡ್ ನಲ್ಲಿ ಬಸ್ರೂರು ಮೂರಕೈ ಕಡೆಗೆ ಹೋಗುತ್ತಿರುವಾಗ ವಡೇಯರ ಹೋಬಳಿ ಗ್ರಾಮದ ನಿತ್ಯಾನಂದ ಕಾಂಪ್ಲೆಕ್ಸ್ ಹತ್ತಿರ ತಲುಪುಷ್ಟರಲ್ಲಿ ಮೂಡ್ಲಕಟ್ಟೆ ಕಡೆಯಿಂದ ಬಸ್ರೂರು ಮೂರು ಕೈ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ರಿಕ್ಷಾವೊಂದು ಒಮ್ಮೇಲೆ ಎಡಕ್ಕೆ ಚಲಾಯಿಸಿ ಸೋಮಯ್ಯ ರವರಿಗೆ ಡಿಕ್ಕಿ ಹೊಡೆಡಿದೆ. ಡಿಕ್ಕಿ ಪರಿಣಾಮ ಸೋಮಯ್ಯ ರಸ್ತೆ ಬದಿಗೆ ಬಿದ್ದಿದ್ದು ಅವರ ಮುಖಕ್ಕೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ರಕ್ತ ಗಾಯಗಳಾಗಿವೆ. ಗಾಯಗೊಂಡವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೋಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ ಸೋಮಯ್ಯ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.