ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಮುದ್ರದಲ್ಲಿ ಮೀನು ಮರಿ ಇಡಲು ಪೂರಕ ವ್ಯವಸ್ಥೆ, ಸಂರಕ್ಷಣೆ ದೃಷ್ಟಿಯಲ್ಲಿ ಕೃತಕ ಬಂಡೆ ಯೋಜನೆ ರೂಪಿಸಲಾಗುತ್ತಿದೆ. ಗುಜರಾತ್ ಮಾದರಿಯಲ್ಲಿ ಈ ಯೋಜನೆ ಅನುಷ್ಟಾನವಾದರೆ ಕರಾವಳಿ ಭಾಗದಲ್ಲಿ ನಾಡದೋಣಿ ಮೀನುಗಾರರು ಹಾಗೂ ಇತರ ಮೀನುಗಾರರಿಗೆ ಅನುಕೂಲವಾಗುತ್ತದೆ. ವೈಜ್ಞಾನಿಕ ಮೀನುಗಾರಿಕಾರಿಕೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಆಗಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೆಕ್ಕಟ್ಟೆ ರಾ.ಹೆ.66ರ ಸಮೀಪದ ನಿರೂಪಮಾ ಕಾಂಪ್ಲೆಕ್ಸ್‍ನಲ್ಲಿ ಮೀನುಗಾರರ ಸಹಕಾರಿ ಸಂಘ ನಿಯಮಿತ ಬೀಜಾಡಿ ಇದರ 4 ಶಾಖೆಯ ಉದ್ಘಾಟಿಸಿ ಮಾತನಾಡಿದರು.
ಬೀಜಾಡಿ ಮೀನುಗಾರರ ಸಹಕಾರ ಸಂಘ ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಆರ್ಹ ಮೀನುಗಾರರಿಗೆ ತಲುಪಿಸುವ ಮೂಲಕ ಸದಸ್ಯರ ವಿಶ್ವಾಸಗಳಿಸಿದೆ. ಮೀನುಗಾರಿಕೆ ಆಧಾರಿತ ಉದ್ಯೋಗ ವಲಯಗಳಿಗೂ ಸಹಕಾರಿಯಾಗಿ ನಿಂತಿದೆ. ಮೀನುಗಾರಿಕ ಕ್ಷೇತ್ರ ವಿಸ್ತಾರವಾಗುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ನಿರುದ್ಯೋಗ ಸಮಸ್ಯೆ ಸ್ವಲ್ಪ ನೀಗುತ್ತದೆ ಎಂದರು.
ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು ಅಧ್ಯಕ್ಷತೆ ವಹಿಸಿದ್ದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಮಾಜಿ ಮೀನುಗಾರಿಕಾ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬೀಜಾಡಿಯ ಹುತಾತ್ಮ ಯೋಧ ಅನೂಪ್ ಪೂಜಾರಿಯವರ ಸ್ಮರಣಾರ್ಥ ಹುತಾತ್ಮ ಯೋಧನ ತಾಯಿ ಮತ್ತು ಪತ್ನಿಗೆ ಸಾಧನಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿ, ಮೀನುಗಾರಿಕೆ ಇವತ್ತು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದವರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯವಹಾರ ಬೆಳೆಯಬೇಕು, ಅದಕ್ಕೆ ಪೂರಕವಾದ ಸವಲತ್ತುಗಳನ್ನು ಕಲ್ಪಿಸಿಕೊಡುವ ಕೆಲಸ ಆಗಬೇಕು. ಮೀನುಗಾರಿಕೆ ಉಳಿಸುವ ನಿಟ್ಟಿನಲ್ಲಿ ಸರಕಾರ ಸರಿಯಾದ ತೀರ್ಮಾನ ತಗೆದುಕೊಳ್ಳಬೇಕು. ಭವಿಷ್ಯದಲ್ಲಿ ಮೀನಿನ ಕೊರತೆಯಾಗದಂತೆ ದೂರದೃಷ್ಟಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಶಾಸಕ ಎ.ಕಿರಣ್ ಕುಮಾರ್ ಕೊಡ್ಲಿ ಅವರು ಗಣಕಯಂತ್ರ ಉದ್ಘಾಟಿಸಿ, ದೈನಂದಿನ ವ್ಯವಹಾರಕ್ಕೆ ಅನುಕೂಲ ಮಾಡುವ ಕೆಲಸವನ್ನು ಎಲ್ಲಾ ಸಹಕಾರ ಸಂಸ್ಥೆಗಳು ಮಾಡುತ್ತಿವೆ. ಆದರೆ ಕೇಂದ್ರ, ರಾಜ್ಯ ಸರ್ಕಾರಗಳು ನೀಡುವ ಸವಲತ್ತುಗಳನ್ನು ಮೀನುಗಾರರಿಗೆ ನೀಡುವ ಕೆಲಸ ಮಾಡುತ್ತಿವೆ ಎಂದರು.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ, ಮೀನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಶಾಸನವೊಂದನ್ನು ತರುವ ಅಗತ್ಯತೆ ಇದೆ. ಮೀನು ಮರಿಗಳನ್ನು ಹಿಡಿಯುವುದರಿಂದ ಮುಂದೊಂದು ದಿನ ಮತ್ಸ್ಯಕ್ಷಾಮ ತಲೆದೊರುವುದು ಖಂಡಿತ. ಅದಕ್ಕಾಗಿ ಈಗಾಗಲೇ ಮೀನುಗಾರರು ಎಚ್ಚೆತ್ತುಕೊಂಡು ಮೀನುಗಾರಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಬೇರೆ ದೇಶಗಳನ್ನು ಅನುಸರಿಸುವ ವಿಧಾನಗಳನ್ನು ಅನುಸರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಠೇವಣಿ ಪತ್ರ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಸಂತೋಷ್ ನಾಯಕ್, ಕಟ್ಟಡ ಮಾಲಿಕ ಟಿ.ರಾಮದಾಸ ಪ್ರಭು. ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಮೀನುಗಾರರು, ಮಹಿಳಾ ಮೀನುಗಾರರನ್ನು ಸನ್ಮಾನಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಮಂಜುನಾಥ ಕುಂದರ್ ಚಾತ್ರಬೆಟ್ಟು, ಉಪಾಧ್ಯಕ್ಷ ರಾಜು ತೋಟದಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಕಾಂಚನ್, ಕಟ್ಟಡ ಮಾಲಿಕರಾದ ಟಿ.ರಾಮದಾಸ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಅಶೋಕ್ ಪೂಜಾರಿ ಬೀಜಾಡಿ, ಬಿ.ಶಿವರಾಮ ಅಮೀನ್ ಬೀಜಾಡಿ, ಬಿ.ಶೇಖರ ಮೊಗವೀರ ಅಂಕದಕಟ್ಟೆ, ದಿನೇಶ ಮೆಂಡನ್ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಜಾನಕಿ ಹಳೆ ಅಳಿವೆ, ಅನುಷಾ ಕೊರವಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಜ್ಯೋತಿ ಡಿ’ಮೆಲ್ಲೋ ಕುಂದಾಪುರ, ನಾಗೇಶ ಬೀಜಾಡಿ, ಸಹ ನಿರ್ದೇಶಕರಾದ ವೆಂಕಟೇಶ್ ಕುಮಾರ್ ಬೀಜಾಡಿ, ಸುನೀಲ್ ಜಿ ನಾಯ್ಕ್ ಬೀಜಾಡಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ರಾಜು ತೋಟದಬೆಟ್ಟು ಕೊಮೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಮೇಶ್ ಕಾಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಅಣ್ಣಯ್ಯ ಪುತ್ರನ್ ಕುಂಭಾಶಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.