ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕೋಣಿ ಪಂಚಾಯತ್ ನಲ್ಲಿ ಇತ್ತೀಚಿಗೆ ನಡೆದ ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಕಣ್ಣಿನ ಆಸ್ಪತ್ರೆ ಮೂಲಕ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದವರಲ್ಲಿ 48 ಫಲಾನುಭವಿಗಳಿಗೆ ಕನ್ನಡಕ ಸೂಚಿಸಿದ್ದು ಅವರಿಗೆಲ್ಲ ಉಚಿತವಾಗಿ ಕ್ಲಬ್ ಮೂಲಕ ವಿತರಿಸಲಾಯಿತು.
ಲಯನ್ ಸಂದೀಪ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತಾಡಿದರು.
ದ್ವಿತೀಯ ಉಪರಾಜ್ಯಪಾಲ ಲಯನ್ ರಾಜೀವ್ ಕೋಟಿಯನ್, ಪಂಚಾಯತ್ ಅಧ್ಯಕ್ಷೆ ಸೌಮ್ಯ ಮೊಗವೀರ, ಲಯನ್ ಮ್ಯಾಥ್ಯೂ ಜೋಸೆಫ್ ಮತ್ತು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಪಿ.ಡಿ.ಓ. ಸ್ವಾಗತಿಸಿ, ವಂದಿಸಿದರು.