ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸಿದ್ಧಾಪುರ ಗ್ರಾಮದ ಜನ್ಸಾಲೆ ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರ ಕುಟುಂಬಸ್ಥರ ಶ್ರೀ ನಾಗ ಸನ್ನಿಧಿಯಲ್ಲಿ ಹರಕೆ ಸೇವೆಯಂತೆ ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರ 25ನೇ ವರ್ಧಂತ್ಯುತ್ಸವದ ಅಂಗವಾಗಿ ಅಷ್ಟೋತ್ತರಶತಕಲಶಸಹಿತ ಬ್ರಹ್ಮಕಲಾಶಾಭೀಷೇಕ ‘ಚತುಃಪವಿತ್ರ ನಾಗಮಂಡಲೋತ್ಸವ’ ಫೆಬ್ರವರಿ 4-2025ನೇ ಮಂಗಳವಾರ ನಡೆಯಲಿದೆ.
ಫೆ.2 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಶ್ರೀ ಗುರುಗಣಪತಿ ಪ್ರಾರ್ಥನೆ-ಪೂಜೆ, ಪುಣ್ಯಾಹವಾಚನ, ದೇವತಾನಾಂದಿ, ಋತ್ವಿಗ್ಗರಣೆ, ಶ್ರೀ ದೇವತಾ ಪ್ರಾರ್ಥನೆ ಗಣಯಾಗ ಸಗ್ರಹಮಹಾಮತ್ಯುಂಜಯ ಹೋಮ, ಸಂಜೆ: 6ರಿಂದ ನಾಗಬನದಲ್ಲಿ ಸ್ಥಾನಶುದ್ಧಿ, ಪ್ರಾಕಾರಶುದ್ಧಿ, ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ-ಪೂಜಾ-ಬಲಿ ಬಿಂಬಪರಿಗ್ರಹ, ಅಧಿವಾಸ ಪೂಜೆ-ಹೋಮ, ಶಯ್ಯಾಕಲ್ಪನೆ-ರಕ್ಷೆ, ದೇವಸ್ಥಾನದಲ್ಲಿ-ಸ್ಥಾನಶುದ್ಧಾದಿಗಳು, ಅಕ್ಷತಹೋಮ, ರಾಕ್ಷೋಘ್ನ ಹೋಮ, ವಾಸ್ತುಹೋಮ-ಪೂಜಾ-ಬಲಿ, ದ್ವಾರಲಕ್ಷ್ಮೀ ಪೂಜೆ ನಡೆಯಲಿದೆ.
ಫೆ.3 ಸೋಮವಾರ ಬೆಳಿಗ್ಗೆ 7.00 ರಿಂದ ಶ್ರೀ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಪ್ರಾತರುತ್ಥಾಪನಾಪೂಜೆ, ಜೀವಕುಂಭ ಪೂಜೆ, ಭಾಗ್ಯಸೂಕ್ತಹೋಮ, ಘಂಟೆ 8.05ಕ್ಕೆ ಒದಗುವ ಕುಂಭಲಗ್ನ ಹಾಗೂ 9.15ಕ್ಕೆ ಒದಗುವ ಮೀನಲಗ್ನ ಸುಮೂಹೂರ್ತಗಳಲ್ಲಿ “ಶ್ರೀ ಸರ್ವಾರ್ಥ ಸಾಧಿಕೆ ಅಮ್ಮನವರ ಹಾಗೂ ಶ್ರೀ ದುಂಢಿಗಣಪತಿ ಮತ್ತು ಶ್ರೀ ವಾಸುಕೀ ನಾಗ ದೇವರ” ಪುನಃ ಪ್ರತಿಷ್ಠ ಜೀವಕುಂಭಾಭಿಷೇಚನ, ನ್ಯಾಸಾದಿಗಳು, ಪ್ರತಿಷ್ಠಾಹೋಮ, ಕಲಾತತ್ವ ಪ್ರಧಾನಾಧಿವಾಸ ಹೋಮ, ಶ್ರೀ ಅಮ್ಮನವರಿಗೆ ಅಷ್ಟೋತ್ತರ ಶತಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶಿವಪಂಚಾಕ್ಷರೀ ಹೋಮ, ಪಂಚದುರ್ಗಾಹೋಮ ಲಕ್ಷ್ಮೀಹೃದಯಮಂತ್ರ, ಪಾರಾಯಣಹೋಮ, ಷಣ್ಣಾರಿಕೇಳ ಗಣಯಾಗ, ನವಚಂಡೀಪಾರಾಯಣ, ಸಂಜೆ: 5.00 ರಿಂದ ನಾಗಬನದಲ್ಲಿ- ಆಶ್ಲೇಷಾಬಲಿ, ಅಷ್ಟೋತ್ತರಶತಪರಿಕಲಶಸಹಿತ, ಬ್ರಹ್ಮಕಲಶಸ್ಥಾಪನೆ, ಕಲಾ-ತತ್ವ-ದೇವತಾವಾಹನೆ, ಬಲಿ, ರಕ್ಷೆ, ನಾಗಮಂಡಲ ಮಂಟಪದಲ್ಲಿ ವಾಸ್ತುರಾಕ್ಷೋಘ್ನ ಹೋಮ, ವಾಸ್ತುಪೂಜಾ-ಬಲಿ ದೇವಸ್ಥಾನದಲ್ಲಿ ದೀಪದುರ್ಗಾನಮಸ್ಕಾರ, ಪುಷ್ಪಾರ್ಚನೆ, ಶ್ರೀರಂಗಪೂಜೆ ನಡೆಯಲಿದೆ.
ಫೆ 4 ಮಂಗಳವಾರ ರಥಸಪ್ತಮಿ ಹಾಗೂ ಅಮೃತಸಿದ್ಧಿಯೋಗದ ಶುಭಘಳಿಗೆಯಲ್ಲಿ ಬೆಳಿಗ್ಗೆ 7 ರಿಂದ ಶ್ರೀ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಚಂಡಿಕಾಹೋಮ, ಆದಿತ್ಯಹೃದಯಹೋಮ, ಸರ್ಪಸೂಕ್ತಹೋಮ, ಅಯುತಸಂಖ್ಯಾತಿಲಹೋಮ, ಕೂಷ್ಮಾಂಡಹೋಮ, ಪವಮಾನಹೋಮ, ನಾಗಮೂಲಮಂತ್ರಹೋಮ, ಆಶ್ಲೇಷಾಬಲಿ ಉದ್ಯಾಪನಾ ಹೋಮ, ವಿಷ್ಣುಸಹಸ್ರನಾಮ ಹೋಮ, ಸುಬ್ರಹ್ಮಣ್ಯ ಹೋಮ, ಚತುರ್ವೇದ ಪಾರಾಯಣ, ಪ್ರಧಾನಾಧಿವಾಸ ಕಲಾತತ್ವಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ವಟು-ಬ್ರಾಹ್ಮಣ ಆರಾಧನೆ, ಕನ್ನಿಕಾ-ಸುವಾಸಿನೀ ಪೂಜೆ, ಆಚಾರ ಪೂಜೆ, ದಾನಾದಿಗಳು, ಸಂದರ್ಶನ ಸೇವೆ, ತೀರ್ಥ ಪ್ರಸಾದ ವಿತರಣೆ, ಪಾಕಶಾಲೆಯಲ್ಲಿ-ಶ್ರೀ ಅನ್ನಪೂರ್ಣೇಶ್ವರಿಹೋಮ, ಪಲ್ಲ ಪೂಜೆ ನಡೆಯಲಿದೆ.
ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ನಾಗ ಸಾನಿಧ್ಯದಲ್ಲಿ ದೀಪಾರಾಧನೆ, ಸಂಜೆ 7.30ಕ್ಕೆ ಸುಧಾಪಯ ಅಭಿಷೇಕ (ಹಾಲ್ಹಿಟ್ಟು ಸೇವೆ) ರಾತ್ರಿ 8.30ಕ್ಕೆ ಮಂಡಲ ಪೂಜೆ, ರಾತ್ರಿ 9 ಗಂಟೆಯಿಂದ ಚತುಃಪವಿತ್ರ ನಾಗಮಂಡಲ ಸೇವೆ ನಡೆಯಲಿದೆ.
ನಾಗಮಂಡಲೋತ್ಸವ ಪ್ರಧಾನ ಪುರೋಹಿತರಾದ ವೇ.ಮೂ.ರಾಮಪ್ರಸಾದ ಅಡಿಗ ಶ್ರೀ ಕ್ಷೇತ್ರ ಗರಿಕೆಮಠ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ. ಪ್ರಧಾನ ಅರ್ಚಕರಾಗಿ ರಾಮಕೃಷ್ಣ ಹೆಬ್ಬಾರ, ಶಕ್ತಿಸ್ಥಳ ಜನ್ಸಾಲೆ, ನಾಗಪಾತ್ರಿಗಳಾಗಿ ವೇ.ಮೂ.ಲೋಕೇಶ ಅಡಿಗರು ಬಡಾಕೆರೆ, ವೈದ್ಯರು-ಸುಬ್ರಹ್ಮಣ್ಯ ವೈದ್ಯ ಮತ್ತು ಬಳಗ ಗೋಳಿಯಂಗಡಿ, ಹರಿಶ್ಚಂದ್ರ ವೈದ್ಯ ನಾಲ್ತೂರು ಭಾಗವಹಿಸಲಿದ್ದಾರೆ.
ಈ ಮಹತ್ಕಾರ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ ಫೆ.2 ಮತ್ತು ಫೆ.3ರಂದು ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ಕೆ.ಎ ಲಕ್ಷ್ಮಣ ಕುಲಾಲ್ ತಿಳಿಸಿದ್ದಾರೆ.