ಕುಂದಾಪುರ :ಗಾಂಧಿಯಂತೆ ಜೋಡಿಸುವ ಕೆಲಸ ಪ್ರಸ್ತುತದ ಅಗತ್ಯ- ಡಾ.ರಾಮದಾಸ್ ಪ್ರಭು

0
113

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರಾಜಕೀಯ ರಹಿತವಾಗಿ, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ, ಒಂದೇ ಮಾರ್ಗದಲ್ಲಿ ಮುನ್ನೆಡೆಸುವುದೇ ಗಾಂಧಿಮಾರ್ಗ. ವೈವಿಧ್ಯತೆಯಲ್ಲಿ ಗೆಲ್ಲುವುದು ಸುಲಭ, ವೈರುದ್ಯತೆಗಳ ನಡುವೆ ಗೆಲ್ಲುವುದು ಮುಖ್ಯ. ಗಾಂಧಿ ವೈರುದ್ಯತೆಗಳ ನಡುವೆ ಜೋಡಿಸುವ ಕೆಲಸ ಮಾಡಿ ಗೆದ್ದವರು. ಸತತ ಸಂವಾದಗಳ ಮೂಲಕ ಮನಸುಗಳನ್ನು ಜೋಡಿಸಿದರು. ಅಂತಹ ಮುಕ್ತ ಸಂವಾದಗಳು ಚಿಂತನೆಗಳನ್ನು ಚುರುಕುಗೊಳಿಸುವ ಕೆಲಸವಾಯಿತು. ಇವತ್ತಿನ ವಾದ – ಸಂವಾದಗಳು ವ್ಯತಿರಿಕ್ತವಾಗಿದ್ದು ಮಾತು ಗೆಲ್ಲಬಾರದು, ಮನಸು ಗೆಲ್ಲುವುದು ಮುಖ್ಯವಾಗಬೇಕು. ಎಲ್ಲರನ್ನು ರಾಜಕೀಯೇತರವಾಗಿ ಒಟ್ಟುಗೂಡಿಸುವ ವ್ಯಕ್ತಿ ಬೇಕು. ಇದು ಬಹುತ್ವದ ಭಾರತ ಎಂದು ಉಡುಪಿಯ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾದ್ಯಾಪಕರಾದ ಡಾ.ರಾಮದಾಸ ಪ್ರಭು ಹೇಳಿದರು.

ಅವರು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ‘ಮಹಾತ್ಮ’ ಸಾಮರಸ್ಯ ಸಭೆಯಲ್ಲಿ ಮಾತನಾಡಿದರು.

ಬಹುಸಂಖ್ಯಾತರು ಯಾವತ್ತೂ ಮಧ್ಯಮ ಮಾರ್ಗದಲ್ಲಿರುತ್ತಾರೆ. ಅಲ್ಲಿ ಆಗುವ ಬದಲಾವಣೆಗಳು ತಾತ್ಕಾಲಿಕ. ಮಧ್ಯಮ ವರ್ಗದ ಹೋರಾಟ ಇವತ್ತಿಗೂ ಪ್ರಸ್ತುತ. ಇವತ್ತಿಗೂ ಕೂಡಾ ಗಾಂಧಿ ಮಾರ್ಗವೇ ಮುಖ್ಯವಾದುದು ಎಂದರು.

Click Here

Click Here

ಕಟ್ಟುವ ಪ್ರಕ್ರಿಯೆ ನಿರಂತರ. ಗಾಂಧಿ ಮಾರ್ಗದಲ್ಲಿ ಕಟ್ಟುವ ಕಾರ್ಯ ನಡೆಯಬೇಕು. 75-80 ವರ್ಷಗಳ ಹಿಂದೆ ಗಾಂಧಿ ಯಾವುದೇ ಸಂಪರ್ಕ ಮಾಧ್ಯಮಗಳ ಸಹಕಾರವಿಲ್ಲದೆ ಕಟ್ಟುವ ಪ್ರಯತ್ನ ಮಾಡಿದ್ದರು. ಅಂತಹ ಪ್ಲಾಟ್‍ಪಾರಂ ಪ್ರಸ್ತುತ ಅಗತ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ದಿನೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ವಲಯ ಧರ್ಮಗುರು ಡಾ.ಫೌಲ್ ರೇಗೋ, ಜಿಲ್ಲಾ ಮುಸ್ಲಿಂ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೌಲನಾ ಜಮೀರ ಅಹಮದ್ ರಶೀದ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಉಪಸ್ಥಿತರಿದ್ದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಉದಯ ಗಾಂವಕರ್ ಸ್ವಾಗತಿಸಿದರು. ಸೌಹಾರ್ದ ಕರ್ನಾಟಕದ ಸಂಚಾಲಕ ಚಂದ್ರಶೇಖರ ವಿ ವಂದಿಸಿದರು.

Click Here

LEAVE A REPLY

Please enter your comment!
Please enter your name here