ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ, ಫೆ.13 :ವಡೆರಹೋಬಳಿ ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್. ಸಿ. ಯ 49 ವಿದ್ಯಾರ್ಥಿಗಳಿಗೆ ಜಿಲ್ಲೆಯ ಎರಡನೇ ಉಪ ರಾಜ್ಯಪಾಲ ಲಯನ್ ರಾಜೀವ್ ಕೋಟಿಯನ್ ಡೈರಿ ಪುಸ್ತಕ ವಿತರಿಸಿದರು.
ಅಧ್ಯಕ್ಷ ಲಯನ್ ರೋವನ್ ಡಿ’ ಕೋಸ್ತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಪರೀಕ್ಷಾ ತಯಾರಿ ಮಾಡಿ, ಅತ್ಯುತ್ತಮ ಅಂಕಗಳಿಸಲು ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯ ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿ, ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.