ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಮನವಿಯಂತೆ ಆರಂಭವಾದ ಕುಂಭ ಮೇಳ ವಿಶೇಷ ರೈಲು ಕೆಲವೇ ನಿಮಿಷಗಳಲ್ಲಿ ಖಾಲಿಯಾದ ಕಾರಣ ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ದಕ್ಷಿಣ ರೈಲ್ವೆಗೆ ಪತ್ರ ಬರೆದಿದ್ದು, ಮತ್ಸ್ಯಗಂದಾ ರೈಲು 17ನೇ ದಿನಾಂಕದಿಂದ ಹೊಸ ಬೋಗಿಗಳಾಗಿ ಬದಲಾಗಲಿದ್ದು, ಹಳೆಯ ಬೋಗಿಗಳನ್ನೇ ಬಳಸಿ ಮಂಗಳೂರು ಪ್ರಯಾಗ್ ಕುಂಭ ಮೇಳ ವಿಶೇಷ ರೈಲಿಗೆ ದಕ್ಷಿಣ ರೈಲ್ವೆ ಹಾಗು ಉಡುಪಿ ಮಂಗಳೂರು ಸಂಸದರಿಗೆ ಪತ್ರ ಬರೆದಿದ್ದಾರೆ.
ಇದರಿಂದ ಟಿಕೇಟ್ ವಂಚಿತ ಅಸಂಖ್ಯಾತ ಜನರಿಗೆ ಟಿಕೇಟ್ ದೊರೆಯಲಿದ್ದು , ಯಾತ್ರಾರ್ತಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.