ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಾರಿಕೆರೆ ಯುವಕ ಮಂಡಲ ಕೋಟ ವತಿಯಿಂದ 24ನೇ ವರ್ಷೋತ್ಸವ ಸಂಭ್ರಮದ ಅಂಗವಾಗಿ ಬಾರಿಕೆರೆ ಪ್ರೀಮಿಯರ್ ಲೀಗ್ 2025, 60 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಫೆ.8, 9 ರಂದು ಬಾರಿಕೆರೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.
ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದರು. ಸಮಾರಂಭದ ವೇದಿಕೆಯಲ್ಲಿ ಅಶಕ್ತರಿಗೆ ಸಹಾಯಧನ ವಿತರಿಸಿದರು.
ಮಾಜಿ ಜಿಲ್ಲಾ ಪಂಚಾಯತ್‍ನ ಸದಸ್ಯರಾದ ರಾಘವೇಂದ್ರ ಕಾಂಚನ್ ಬಾರಿಕೆರೆ, ಕೋಟತಟ್ಟು ಗ್ರಾಮ ಪಂಚಾಯತ್‍ನ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ , ಕೋಟ ಸಿಎ ಬ್ಯಾಂಕಿನ ನಿರ್ದೇಶಕರಾದ ರಂಜಿತ್ ಕುಮಾರ್ ಬಾರಿಕೆರೆ, ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ, ಸಂಸ್ಥೆಯ ಮಾಜಿ ಗೌರವಾಧ್ಯಕ್ಷ ಸಿರಾಜ್ ಸಾಹೇಬ್, ಮಾಜಿ ಅಧ್ಯಕ್ಷರಾದ ರತ್ನಾಕರ ಬಾರಿಕೆರೆ , ಅವಿನಾಶ ಬಾರಿಕೆರೆ, ಪ್ರಧಾನ ಕಾರ್ಯದರ್ಶಿ ಪವನ ಕುಂದರ್ ಬಾರಿಕೆರೆ, ಮುಕ್ತೇರ್ ಸಾಹೇಬ್ , ರವೀಂದ್ರ ಕಾಂಚನ್ ಬಾರಿಕೆರೆ ಮತ್ತು ಸಂಘದ ಉಪಸ್ಥಿತರಿದ್ದರು.
ಕೋಟ ಸಿ.ಎ ಬ್ಯಾಂಕಿನ ಚುನಾವಣೆಯಲ್ಲಿ ಜಯಗಳಿಸಿದ ರಂಜಿತ್ ಕುಮಾರ್ ಬಾರಿಕೆರೆಯವರನ್ನು ಸನ್ಮಾನಿಸಲಾಯಿತು.
ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ರಾಘವೇಂದ್ರ ಕಾಂಚನ್ ಬಾರಿಕೆರೆ ಮಾಲಕತ್ವ ತಂಡ ಬಾರಿಕೆರೆ ಬೂಶ್ ರೇಂಜರ್ಸ್ ತಂಡ ಜಯಗಳಿಸಿತು, ದ್ವಿತೀಯ ಬಹುಮಾನವನ್ನು ರವಿ ಕುಂದರ್ ಮಾಲಿಕತ್ವದ ತಂಡ ಬಾರಿಕೆರೆ ಸೂಪರ್ ಕಿಂಗ್ಸ್ ತಂಡ ಜಯಗಳಿಸಿತು. ಪ್ರತಾಪ ಬಾರಿಕೆರೆ ಸ್ವಾಗತಿಸಿ, ಪ್ರಮೋದ್ ಆಚಾರ್ಯ ಬಾರಿಕೆರೆ ವಂದಿಸಿದರು, ಕಾರ್ಯಕ್ರಮವನ್ನು ಪ್ರದೀಪ್ ನಿರೂಪಿಸಿದರು.