ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಾಸ್ಟರ್ ಶ್ಯಾಮ್ ಅವರು ಕೊರೊನಾ ಸಮಯದಲ್ಲಿ ಯೂಟ್ಯೂಬ್ ಮೂಲಕ ಕೊಳಲು ನುಡಿಸುವುದನ್ನು ಕಲಿತು ಅನೇಕ ಜಿಲ್ಲಾಮಟ್ಟ ಹಾಗೂ ಮೂರು ಬಾರಿ ಸತತವಾಗಿ ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನು ಪಡೆದು ಅದ್ವಿತೀಯ ಸಾಧನೆ ಮಾಡಿ ಮೊನ್ನೆ ತಾನೇ 2024ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಸ್ವೀಕರಿಸಿ, ತನ್ನ 14ನೇ ವಯಸ್ಸಿನಲ್ಲಿ ಗರಿಷ್ಠ ವಿಭಿನ್ನ ರಾಗಗಳನ್ನು ಕೊಳಲಿನಲ್ಲಿ ಒಂದು ನಿಮಿಷದಲ್ಲಿ ನುಡಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆಯನ್ನು ನಿರ್ಮಿಸಿದ್ದಾನೆ. ಈತ ಗಂಗೊಳ್ಳಿಯ ಛಾಯಾಗ್ರಾಹಕ ಗಣೇಶ್ ಪೂಜಾರಿ ಮತ್ತು ಪ್ರಾಧ್ಯಾಪಕಿ ಮಾಲತಿ ಗಣೇಶ ಅವರ ಪುತ್ರ. ಗಂಗೊಳ್ಳಿಯ ಎಸ್. ವಿ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ . ಹೆಮ್ಮಾಡಿಯ ಪ್ರಸಿದ್ಧ ವೆಲೋಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ಇದರ ಸದಸ್ಯರಾಗಿ ಕರಾಟೆ ಕ್ಷೇತ್ರದಲ್ಲೂ ಸಾಧನೆಗೈದು ಬ್ಲಾಕ್ ಬೆಲ್ಟನ್ನು ಪಡೆದಿರುತ್ತಾರೆ.
ಮಾಸ್ಟರ್ ಶ್ಯಾಮ್ ಅವರ ಈ ಎಲ್ಲಾ ಸಾಧನೆಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ಪ್ರತಿಯೊಂದು ಹೆಜ್ಜೆಯೂ ಯಶಸ್ಸಿನತ್ತ ಸಾಗಿ ದೇಶಕ್ಕೆ ಹಾಗೂ ಹುಟ್ಟೂರಿಗೆ ಮತ್ತಷ್ಟು ಕೀರ್ತಿಯನ್ನು ತನ್ನಿ – ವೆಲೋಸಿಟಿ ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್, ಹೆಮ್ಮಾಡಿ