ಕುಂದಾಪುರ ಮಿರರ್ ಸುದ್ದಿ…
ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅಂಪಾರು ಇಲ್ಲಿ ಮಾರ್ಚ 1ರಂದು ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚಿನ ಪರಿಣಾಮಕಾರಿ ವಿಜ್ಞಾನ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿ ಅವುಗಳ ಕುರಿತು ಮಾಹಿತಿಗಳನ್ನು ನೀಡಿದರು .
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮುಂಬೈ ಪ್ರುಡೆನ್ಶಿಯಲ್ ಟ್ರಾವೆಲ್ಸ್ ಪ್ರೈ. ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹುಂತ್ರಿಕಿ ಸುಧಾಕರ ಶೆಟ್ಟಿ ಆಗಮಿಸಿ, ಇದೊಂದು ಅತ್ಯಾಕರ್ಷಕ, ಪರಿಣಾಮಕಾರಿ, ವಿಶಿಷ್ಟ ಕಾರ್ಯಕ್ರಮವಾಗಿದೆ. ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಜೊತೆಗೆ, ದೈನಂದಿನ ಜೀವನದಲ್ಲಿ ವಿಜ್ಞಾನದ ಪಾತ್ರ ಅರಿಯಲು ಸಹಕಾರಿಯಾಗುತ್ತದೆ. ಇದು ಮಕ್ಕಳಿಗೆ ಜ್ಞಾನ ಮತ್ತು ಅನುಭವ ನೀಡಿ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸುತ್ತದೆ ಎಂದು ಗಣ್ಯರು ತಿಳಿಸಿದರು.
ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಕಾರ್ಯಕ್ರಮ
ದ ಅಧ್ಯಕ್ಷತೆ ವಹಿಸಿದ್ದರು.
ಸುಭಾಷ್ ಚಂದ್ರ ಶೆಟ್ಟಿ ಕೊಡ್ಲಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿಜ್ಞಾನ ಮಾದರಿಗಳನ್ನು ತಯಾರಿಸಿ, ಪ್ರದರ್ಶನ ಮಾಡಿದ ಮಕ್ಕಳಿಗೆ ಅಭಿನಂದನೆ ತಿಳಿಸಿದರು.
ಅನೇಕ ಪೋಷಕರು ವಿಜ್ಞಾನ ಮೇಳಕ್ಕೆ ಆಗಮಿಸಿ ಮಕ್ಕಳ ವಿಜ್ಞಾನ ಮಾದರಿಗಳನ್ನು ನೋಡಿ ಪ್ರಶಂಸಿಸಿ, ಪ್ರೋತ್ಸಾಹಿಸಿದರು.