ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನು ಡಾ. ಮೇಲ್ವಿನ್ ಡಿ’ ಸೋಜಾ ಉದ್ಘಾಟಿಸಿದರು.
ರೆಡ್ ಕ್ರಾಸ್ ಚೇರ್ಮನ್ ಜಯಕರ ಶೆಟ್ಟಿ ರಕ್ತದಾನದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಲಯನ್ ಬಾಲಕೃಷ್ಣ ಶೆಟ್ಟಿ ರಕ್ತದಾನಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋವನ್ ಡಿ’ಕೋಸ್ತ್, ಲಯನ್ ಪುನೀತ್ ಶೆಟ್ಟಿ, ಲಯನ್ ಮಾಥ್ಯು ಜೋಸೆಫ್, ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.
ಡಾ. ಶರವಣನ್ ಏನ್. ಎಸ್. ಎಸ್. ಕೋ – ಅರ್ಡಿನೆಟರ್ ರ್ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಿಬಿರದಲ್ಲಿ 70 ಯೂನಿಟ್ ರಕ್ತ ಸಂಗ್ರಹಿಸಲಾಗಿದ್ದು, ಸಂಸ್ಥೆಯ ಚೇರ್ಮನ್ ಸಿದ್ದಾರ್ಥ್ ಶೆಟ್ಟಿಯವರು ಶಿಬಿರಕ್ಕೆ ಭೇಟಿ ನೀಡಿ ರಕ್ತ ದಾನಿಗಳಿಗೆ ಶುಭಹಾರೈಸಿದರು.