ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು 2024ರಲ್ಲಿ ನಡೆಸಿದ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಎಂಟು ರ್ಯಾಂಕ್ ಗಳು ದೊರಕಿವೆ.
ಬಿ.ಎಸ್.ಸಿ ಯಲ್ಲಿ ಬನ್ನಾಡಿಯ ದಾಮೋದರ ಮತ್ತು ಲತಾ ಅವರು ಪುತ್ರ ಕೆದ್ಲಾಯ ಶ್ರೀ ಕೃಷ್ಣ ದಾಮೋದರ ಅವರಿಗೆ ಪ್ರಥಮ ರ್ಯಾಂಕ್ ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮತ್ತು ಸುಲೋಚನಾ ಅವರು ಪುತ್ರಿ ಸ್ಪೂರ್ತಿ ಜಿ.ಎಸ್ ಅವರಿಗೆ ಆರನೇ ರ್ಯಾಂಕ್ ದೊರೆತಿದೆ.
ಬಿ.ಎ ಪದವಿ ಪರೀಕ್ಷೆಯಲ್ಲಿ ಕುಂಭಾಶಿಯ ಮನೋಹರ ಪ್ರಭು ಮತ್ತು ಮಲ್ಲಿಕಾ ಪ್ರಭು ಅವರ ಪುತ್ರಿ ಮಿಥುನ ಪ್ರಭು ಅವರಿಗೆ ಪ್ರಥಮ ರ್ಯಾಂಕ್, ಕುಂದಾಪುರದ ಮಂಗಲಪಾಂಡೆ ರಸ್ತೆಯ ಶಿವರಾಮ ಶೆಟ್ಟಿ ಮತ್ತು ಸರಸ್ವತಿ ಶೆಟ್ಟಿ ಅವರು ಪುತ್ರಿ ಸುಶ್ಮಿತಾ ಶೆಟ್ಟಿ ಅವರಿಗೆ ಆರನೇ ರ್ಯಾಂಕ್ ದೊರೆತಿದೆ.
ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಕಾಳಾವರದ ರಾಜು ಶೆಟ್ಟಿಗಾರ್ ಮತ್ತು ಸುನಂದಾ ಅವರ ಪುತ್ರಿ ರಕ್ಷಿತಾ ಅವರಿಗೆ ಪ್ರಥಮ ರ್ಯಾಂಕ್, ಮೇಲೆ ಹೊಸೂರು ಮುಳ್ಳಿಮನೆಯ ಸುಧಾಕರ ಶೆಟ್ಟಿ ಮತ್ತು ಭವಾನಿ ಅವರು ಪುತ್ರಿ ಮಾನಸ ಅವರಿಗೆ ದ್ವಿತೀಯ ರ್ಯಾಂಕ್ ಆಲೂರಿನ ಚಂದ್ರಶೇಖರ ಶೆಟ್ಟಿ ಮತ್ತು ಸರೋಜಾ ಅವರು ಪುತ್ರಿ ಪಾವನಾ ಅವರಿಗೆ ಎಂಟನೇ ರ್ಯಾಂಕ್ ದೊರೆತಿದೆ.
ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿ ಹಾಡಿಮನೆ ಬಳ್ಕೂರಿನ ಸೀತಾರಾಮ ಶೇರಿಗಾರ್ ಮತ್ತು ಭಾರತಿ ಅವರು ಪುತ್ರಿ ಅರ್ಪಿತಾ ಅವರಿಗೆ ಏಳನೇ ರ್ಯಾಂಕ್ ದೊರೆತಿದೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.