ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮುಳ್ಳಿಕಟ್ಟೆ ಸಮೀಪ ಬಂಟ್ವಾಡಿ ಆಲೂರು ಮುಖ್ಯರಸ್ತೆಯ ಗುಡ್ಡಮ್ಮಾಡಿ ಕ್ರಾಸ್ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಸ್ವಿಫ್ಟ್ ಕಾರು, ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ರಸ್ತೆ ಮಧ್ಯದಲ್ಲಿಯೇ ಕಾರು ಬಿಟ್ಟು ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಕಾರಿನಿಂದ ತಪ್ಪಿಸಿಕೊಂಡು ಓಡಿಹೋದ ಆರೋಪಿಗಳು ಸಮೀಪದಲ್ಲಿ ಹರಿಯುತ್ತಿದ್ದ ಸೌಪರ್ಣಿಕಾ ನದಿಗೆ ಹಾರಿದ್ದಾರೆ. ಅವರನ್ನು ಹಿಂಬಾಲಿಸಿಕೊಂಡು ಬಂದ ಸ್ಥಳಿಯರು ಹಾಗೂ ಮಾಹಿತಿ ಪಡೆದು ಬಂದ ಗಂಗೊಳ್ಳಿ ಪೊಲೀಸರು ಹೊಳೆಗೆ ಹಾರಿದ ನಾಲ್ಕು ಆರೋಪಿಗಳ ಪೈಕಿ ಮೂವರನ್ನು ಹೊಳೆಯಿಂದಲೆ ಬಂಧಿಸಿದ್ದಾರೆ. ಆದರೆ ಉಳಿದ ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಆತ ಹೊಳೆಯಲ್ಲಿ ಮುಳುಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಾಪತ್ತೆಯಾದ ಆರೋಪಿಗಾಗಿ ಹೊಳೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನಾ ಸ್ಥಳದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ ಹಾಗೂ ಗಂಗೊಳ್ಳಿ ಪೊಲೀಸರು ಇದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.