ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಕುಂದಾಪುರದಲ್ಲಿ ನಿಲುಗಡೆ – ಹಿತರಕ್ಷಣಾ ಸಮಿತಿ ಹರ್ಷ

0
406

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ತಿರುವನಂತಪುರಂ ನಿಜಾಮುದ್ದೀನ್ ಎಕ್ಸ್ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಕುಂದಾಪುರ ನಿಲುಗಡೆ ಬೇಕು‌ ಎನ್ನುವ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವರ್ಷಗಳ ಬೇಡಿಕೆಯನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರು ಈಡೇರಿಸಿದ್ದು , ಎರಡೂ ರೈಲುಗಳಿಗೆ ಕುಂದಾಪುರ ನಿಲುಗಡೆ ನೀಡಿ ಸಚಿವರು ಆದೇಶ ನೀಡಿದ್ದು, ಕೊಲ್ಲೂರು ಮೂಕಾಂಬಿಕಾ ದೇಗುಲದ ಭಕ್ತಾದಿಗಳಿಗೆ, ದೆಹಲಿ,ಮುಂಬಯಿ, ವಾಪಿ, ಸಿಲ್ವಾಸ ತೆರಳುವ ಕುಂದಾಪುರದ ಪ್ರಯಾಣಿಕರಿಗೆ ಬಾರೀ ಅನೂಕುಲವಾಗಿದ್ದು ಸಂಸದರ ಈ ಸಾಧನೆಗೆ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಹರ್ಷ ವ್ಯಕ್ತ ಪಡಿಸಿದ್ದಾರೆ.

ಕರಾವಳಿ ಕರ್ನಾಟಕದ ಅಸಂಖ್ಯಾತ ಜನ ಮುಂಬಯಿ ಹೊರವಲಯ, ಗುಜಾರಾತ್ ಬಳಿಯ ದಮನ್ , ಸಿಲ್ವಾಸ , ವಾಪಿ ಮತ್ತಿರ ಪ್ರದೇಶಗಳಲ್ಲಿ ವಾಸವಾಗಿದ್ದು ಈ ಪ್ರಯಾಣಿಕರಿಗೆ ಮತ್ಸ್ಯಗಂದಾ ಮತ್ತು ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡಿ ಬೇರೆ ರೈಲುಗಳನ್ನು ಹಿಡಿಯ ಬೇಕಾದ ಪರಿಸ್ಥಿತಿ ತಪ್ಪಿದೆ.

ಸಂಸದರಾಗಿ ಮೊದಲ ಸಲ ಕುಂದಾಪುರ ರೈಲು ನಿಲ್ದಾಣಕ್ಕೆ ಬೇಟಿ ನೀಡಿದಾಗ ಸಮಿತಿ‌ ಸಲ್ಲಿಸಿದ ಮನವಿಯಂತೆ ಸಂಸದರು ಕೇಂದ್ರ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಸೋಮಣ್ಣನವರಿಗೆ ಮನವಿ ಮಾಡಿ ಕರಾವಳಿ ಭಾಗದ ಬೇಡಿಕೆಗಳನ್ನು ಸಲ್ಲಿಸಿದ್ದರು.

Click Here

Click Here

ಪ್ರತೀ ಬುಧವಾರ ಮದ್ಯಾಹ್ನ 2 ಗಂಟೆಗೆ ಕುಂದಾಪುರದಿಂದ ಎರ್ನಾಕುಲಂ ದೆಹಲಿ ಕಡೆ ತೆರಳುವ ರೈಲು ಶನಿವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯಿಂದ ಬಂದು ಎರ್ನಾಕುಲಂ ಕಡೆ ತೆರಳುತ್ತದೆ. ತಿರುವನಂತಪುರಂ ದೆಹಲಿ ರೈಲು ಪ್ರತೀ ಶನಿವಾರ ಮಧ್ಯಾಹ್ನ 2 ಗಂಟೆಗೆ ಕುಂದಾಪುರ ಮೂಲಕ ದೆಹಲಿಗೆ ತೆರಳಲಿದ್ದು, ಪ್ರತೀ ಗುರುವಾರ ಮದ್ಯಾಹ್ನ‌ 2 ಗಂಟೆಗೆ ದೆಹಲಿಯಿಂದ ಕುಂದಾಪುರ ಮೂಲಕ ತಿರುವನಂತಪುರಂ ತಲುಪಲಿದೆ‌.

ಗೋವಾ ಮುಂಬಯಿ ಮೂಲಕ ದೆಹಲಿಗೆ ತೆರಳುವ ಈ ರೈಲುಗಳ ನಿಲುಗಡೆ ಮಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರ ಸಾಧನೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ ‌

Click Here

LEAVE A REPLY

Please enter your comment!
Please enter your name here