ಪರಿಶ್ರಮದ ಮೂಲಕ ಸಾಧನೆ – ನಾಗೇಶ್ ಶ್ಯಾನುಭಾಗ್
ಕುಂದಾಪುರ ಮಿರರ್ ಸುದ್ದಿ…
ಕೋಟ: ಪರಿಶ್ರಮದ ಮೂಲಕ ಸಾಧನೆ ಮಜಲುಗಳನ್ನು ದಾಟಲು ಸಾಧ್ಯ ಎನ್ನುವುದಕ್ಕೆ ಶಮಂತ್ ಕುಮಾರ್ ಸಾಕ್ಷಿಯಾಗಿದ್ದಾರೆ ತನ್ನ ಚಿಕ್ಕ ವಯಸ್ಸಿನಲ್ಲೆ ಸಾಧನೆಯ ಶಿಖರಕ್ಕೆಮುಮ್ಮಡಿ ಇಟ್ಟಿದ್ದಾರೆ ಇದು ಅತ್ಯಂತ ಪ್ರಶಂಸನೀಯ ಎಂದು ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್ ಹೇಳಿದರು.
ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಇತ್ತೀಚಿಗೆ ಪಿಎಚ್ ಡಿ ಪದವಿ ಪಡೆದ ಸಂಸ್ಥೆಯ ಸದಸ್ಯ ಶಮಂತ್ ಕುಮಾರ್ ಕೆ.ಎಸ್ ಇವರಿಗೆ ಪಂಚವರ್ಣ ಗೌರವ ಸಂಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ದೊಡ್ಡ ಸಾಧನೆಯಾಗಿದೆ ಶಮಂತ್ ಕುಮಾರ್ ವಿವಿಧ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಕೊಂಡು ಇತರ ಯುವ ಸಮುದಾಯಕ್ಕೆ ಮಾದರಿ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ಇಂಥಹ ಸಾಧಕರಿಗೆ ಕ್ರೀಯಾಶೀಲ ಸಂಘಟನೆ ಪಂಚವರ್ಣ ಗುರುತಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಪಿ.ಎಚ್ ಡಿ ಪದವಿ ಪಡೆದ ಶಮಂತ್ ಕುಮಾರ್ ಕೆ.ಎಸ್ ಇವರನ್ನು ಗುರುತಿಸಿ ಗೌರವ ಸಂಮ್ಮಾನ ನೀಡಲಾಯಿತು.
ಸಭೆ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಹಿರಿಯ ಸಾಹಿತಿ ಶಾಂತಾ ಬಿ.ಐತಾಳ್, ಪಂಚವರ್ಣ ಯುವಕಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಶಮಂತ್ ಕುಮಾರ್ ತಂದೆ ಶ್ರೀಧರ ಗಾಣಿಗ, ಸಹೋದರಿ ಶಿಲ್ಪಾ ವಿ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಯುವಕ ಮಂಡಲದ ಸದಸ್ಯ ಕೇಶವ ಆಚಾರ್ ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.