ಸಮಾಜ ಸೇವಕ ಈಶ್ವರ್ ಮಲ್ಪೆ ಟೀಮ್ ಭವಾಭ್ಧಿ ಕಡಲೂರ ಸನ್ಮಾನ ಪ್ರದಾನ
ಕುಂದಾಪುರ ಮಿರರ್ ಸುದ್ದಿ…
ಕೋಟ: ಸಂಘಸಂಸ್ಥೆಗಳು ನಿರಂತರ ಕ್ರೀಯಾಶೀಲತೆ ಸಾಮಾಜಿಕ ಹೊಣೆಗಾರಿಕೆ ಆ ಸಂಘಟನೆಯನ್ನುಬಹು ಎತ್ತರಕ್ಕೆ ಕೊಂಡ್ಯೋಯುತ್ತದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಶನಿವಾರ ಕೋಟತಟ್ಟು ಪಡುಕರೆಯಲ್ಲಿ ಟೀಮ್ ಭವಾಭ್ಧಿ ಪಡುಕರೆ ಇವರ ನಾಲ್ಕನೆ ವರ್ಷದ ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಟೀಮ್ ಭವಾಭ್ಧಿ ಪಡುಕರೆ ಸಮಾಜಕ್ಕೆ ಒಂದಿಷ್ಟು ಸಾಮಾಜಿಕ ಕಾರ್ಯಗಳನ್ನು ನೀಡುತ್ತಿದೆ ಇದು ಅತ್ಯಂತ ಪ್ರಶಂಸನೀಯ ಕಾರ್ಯ ಅಂತಯೇ ಸಂಸ್ಥೆ ನೀಡುವ ಕಡಲೂರ ಸನ್ಮಾನ ಅರ್ಥಪೂರ್ಣ ವ್ಯವಸ್ಥೆಗೆ ಮುನ್ನುಡಿ ಬರೆದಿದೆ. ಸಮಾಜ ಕಟ್ಟುವ ಕಾಯಕದ ಜತೆ ನೈಜ ಸಾಧಕರನ್ನು ಹುಡುಕಿ ಗೌರವಿಸುತ್ತಿರುವುದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಲಿದೆ ಎಂದರು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಯುವ ಸಮುದಾಯದ ದಿಕ್ಕು ಬದಲಿಸುವ ಕಾಲದಲ್ಲಿ ಸಂಘಸಂಸ್ಥೆಗಳತ್ತ ಮುಖ ಮಾಡುತ್ತಿರುವುದು ಬದಲಾವಣೆಯ ಹೆಜ್ಜೆಯಾಗಿದೆ. ಈಶ್ವರ್ ಮಲ್ಪೆ ಎಂಬ ದೈತ್ಯ ಸಮಾಜಸೇವಕನ ಕಾರ್ಯವೈಖರಿ ಹಾಗೂ ಸಮಾಜ ಅವರನ್ನು ಗುರುತಿಸುವ ಪರಿ ಪ್ರಶಂಸನೀಯ ಕಾರ್ಯವಾಗಿದೆ ಎಂದರು.
ಇದೇ ವೇಳೆ ಟೀಮ್ ಭವಾಭ್ಧಿ ಕಡಲೂರ ಸನ್ಮಾನವನ್ನು ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೀಮ್ ಭವಾಭ್ಧಿ ಅಧ್ಯಕ್ಷ ಸಂತೋಷ ತಿಂಗಳಾಯ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ, ಸಮಾಜಸೇವಕ ಶ್ರೀಕಾಂತ್ ಶೆಣೈ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ, ಉಪನ್ಯಾಸಕ ಸಂಜೀವ ಗುಂಡ್ಮಿ ಮತ್ತಿತರರು ಉಪಸ್ಥಿತರಿದ್ದರು.
ಟೀಮ್ ಭವಾಭ್ಧಿ ಸಂಚಾಲಕ ರವೀಂದ್ರ ತಿಂಗಳಾಯ ಪ್ರಾಸ್ತಾವನೆ ಸಲ್ಲಿದರು. ಕಾರ್ಯಕ್ರಮವನ್ನು ಮಂಜುನಾಥ್ ನಿರೂಪಿದರು. ಗೌರವ ಸಲಹೆಗಾರ ಗಣೇಶ್ ತಿಂಗಳಾಯ ಸ್ವಾಗತಿಸಿ, ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಮಂಗಳೂರು ಅರೆಹೊಳೆ ನಂದಗೋಕುಲ ಪ್ರತಿಷ್ಠಾನ ಹಾಗೂ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಮಂಗಳೂರಿನ ಪ್ರಸಿದ್ಧ ನಾಟಕ ತಂಡದಿಂದ ಪರಮಾತ್ಮ ಪಂಜುರ್ಲಿ ನಾಟಕ ಪ್ರದರ್ಶನಗೊಂಡಿತು.