ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆನೆಗುಡ್ಡೆ ಕುಂಭಾಶಿ ಕುಂದಾಪುರ ಇಲ್ಲಿ ಶೃಂಗೇರಿ ಶಂಕರ ಮಠ ಲೋಕಾರ್ಪಣೆ ಮತ್ತು ನಾಗಮಂಡಲೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ 10 ದಿನಗಳ ನಿತ್ಯ ಭಜನಾ ಉತ್ಸವ ಕಾರ್ಯಕ್ರಮಕ್ಕೆ ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತಿಯ ಧರ್ಮಮಾಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ಮತ್ತು ನಾಗ ಪಾತ್ರಿಗಳು ಬಡಾಕೆರೆ ಇವರು ದೀಪ ಪ್ರಜ್ವಲನೆಯನ್ನ ಮಾಡಿ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದ ಭಜನಾ ವ್ಯವಸ್ಥಾಪಕರಾದ ಜಯಕರ್ ಪೂಜಾರಿ ಗುಲ್ವಾಡಿ ಮತ್ತು ತಾಲ್ಲೂಕು ಒಕ್ಕೂಟದ ಕಾರ್ಯದರ್ಶಿ ನಿತಿನ್ ವಿಠಲವಾಡಿ, ಸಂಘಟಕರಾದ ಸರೋಜ ವಿ.ಮೂರ್ತಿ, ಸಂತೋಷ್ ಮದ್ದುಗುಡ್ಡೆ, ವನಿತಾ ಕುಂದಾಪುರ, ವಿಷ್ಣು ಮೂರ್ತಿ, ಸುಜಾತ ಕುಂಭಾಶಿ, ಅಡಿಗರ ಸಹೋದರರು ಉಪಸ್ಥಿತರಿದ್ದರು.