ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕಾರಣವೇನೇ ಇರಲಿ, ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಈ ಪರಿಯಾಗಿ ಒಬ್ಬ ಮಹಿಳೆಯನ್ನು ತಳಿಸುತ್ತಿರುವುದು ಅದು ಕರ್ನಾಟಕದಲ್ಲಿ ಅನ್ನುವುದು ನಿಜಕ್ಕೂ ನಾಚಿಕೆ ತರುವಂತಹದು. ಈ ಮಹಿಳೆ ಅಪರಾಧ ಮಾಡಿದ್ದೆ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಪೋಲಿಸ ಇಲಾಖೆ ಕಾನೂನಿನ ವ್ಯವಸ್ಥೆ ಎಲ್ಲವೂ ಇದೆ. ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಯಾರು ಸಹಿಸುವುದಿಲ್ಲ. 20 ವರ್ಷಗಳ ಹಿಂದೆ ಮಲ್ಪೆಯಲ್ಲಿ ನಡೆದ ಅಮಾನವೀಯ ಕೃತ್ಯ ಹಾಜಿಯಬ್ಬ, ಹಸನಬ್ಬರ ಘಟನೆ ನೆನಪಿಗೆ ಬಂತು. ವಿಶೇಷವೆಂದರೆ ಅಂದಿನ ಘಟನೆಯ ಆರೋಪಿ ಇಂದು ಘಟನೆ ನಡೆದ ಇದೆ ಕ್ಷೇತ್ರದ ಜನನಾಯಕ. ನಮಗೆ ಉತ್ತರ ಪ್ರದೇಶದ ಮಾದರಿ ಬೇಕೆನ್ನುತ್ತಿದ್ದರು. ಈಗ ಉಡುಪಿ ಮಲ್ಪೆಯಲ್ಲಿ ಇದೆ ಆರಂಭವಾಯಿತಲ್ಲವೇ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ, ಉಪಮುಖ್ಯಮಂತ್ರಿಗಳಾದ ಡಿ. ಕೆ.ಶಿವಕುಮಾರ್ ರವರೇ ದಯವಿಟ್ಟು ಈ ಘಟನೆ ಕುರಿತು ಮಾಹಿತಿ ತಿಳಿದು ಕೊಂಡು ತಪ್ಪಿತಸ್ಥರಿಗೆ ಶೀಘ್ರ ಕಠಿಣ ಶಿಕ್ಷೆ ನೀಡಲು ಸೂಚಿಸಬೇಕು.