ಅಂಕದಕಟ್ಟೆ :ಸಹನಾ ಗ್ರೂಪ್‍ನ ಸಹನಾಸ್ ಮೀನು ಖಾದ್ಯಗಳ ಹೊಸ ‘ಫಿಶ್ ನ್ ಕರಿ’ ರೆಸ್ಟೋರೆಂಟ್‍ ಶುಭಾರಂಭ

0
463

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕುಂದಾಪುರ ಭಾಗಕ್ಕೆ ಬರುವ ಪ್ರವಾಸಿಗರು ಹೆಚ್ಚಾಗಿ ಮೀನು ಊಟಕ್ಕೆ, ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ಕುಂದಾಪುರದ ಪರಿಸರದಲ್ಲಿ ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೀನು ಊಟ ಹಾಗೂ ಮೀನಿನ ಖಾದ್ಯಗಳು ದೊರೆಯುವ ಹೋಟೆಲ್‍ಗಳು ಕಡಿಮೆ ಇದೆ. ಉತ್ತಮ ಮೀನು ಊಟವನ್ನು ಜನರು ಹುಡುಕಿಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುಂದಾಪುರದಲ್ಲಿ ಕಳೆದ 10 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸುಗಳಿಸಿ ಪ್ರಸಿದ್ಧಿಯಾಗಿರುವ ಸುರೇಂದ್ರ ಶೆಟ್ಟಿ ನೇತೃತ್ವದ ಸಹನಾ ಗ್ರೂಪ್ ಸಂಸ್ಥೆ, ಕುಂದಾಪುರ ಕೋಟೇಶ್ವರ ಪರಿಸರದಲ್ಲಿ ಇನ್ನೊಂದು ಮೀನು ಖಾದ್ಯಗಳ ಹೊಸ ‘ಫಿಶ್ ನ್ ಕರಿ’ ರೆಸ್ಟೋರೆಂಟ್ ಪ್ರಾರಂಭಿಸುತ್ತಿರುವುದು ಶ್ಲಾಘನೀಯ. ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೀನಿನ ಆಹಾರೋತ್ಪನ್ನಗಳನ್ನು ಜನರಿಗೆ ನೀಡುವ ಮೂಲಕ ಈ ಉದ್ಯಮದಲ್ಲಿ ಅವರು ಯಶಸ್ಸು ಗಳಿಸುವಂತಾಗಲಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು.

Click Here

Click Here

ಕುಂದಾಪುರ ತಾಲೂಕಿನ ಕೋಟೇಶ್ವರ ಅಂಕದಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಸಹನಾ ಎಸ್ಟೇಟ್‍ನಲ್ಲಿ ಸಹನಾ ಗ್ರೂಪ್‍ನ ನೂತನ ಸಹನಾಸ್ ‘ಫಿಶ್ ನ್ ಕರಿ’ ರೆಸ್ಟೋರೆಂಟ್‍ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹನಾ ಗ್ರೂಪ್‍ನ ಆಡಳಿತ ನಿರ್ದೇಶಕರಾದ ಸುರೇಂದ್ರ ಶೆಟ್ಟಿ ಮಾತನಾಡಿ, ಕುಂದಾಪುರದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ 10ನೇ ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಿನೂತನವಾದ ಮೀನು ಖಾದ್ಯಗಳ ರೆಸ್ಟೋರೆಂಟ್ ಮಾಡಬೇಕು ಎಂಬ ಆಸೆ ಇಟ್ಟುಕೊಂಡು, ವಿನೂತನ ಶೈಲಿಯ ಕಟ್ಟದಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಮೀನು ಖಾದ್ಯಗಳ ರೆಸ್ಟೋರೆಂಟ್ ಪ್ರಾರಂಭಿಸಲಾಗಿದೆ. ಜನರಿಗೆ ಹಾಗೂ ಪ್ರವಾಸಿಗರಿಗೆ ಮೀನು ಊಟ ಅಚ್ಚುಮೆಚ್ಚು ಹಾಗೂ ಹೆಚ್ಚೆಚ್ಚು ಪ್ರವಾಸಿಗರನ್ನು ಮೀನು ಊಟ ಈ ಭಾಗಕ್ಕೆ ಸೆಳೆಯುತ್ತಿದೆ. ಮಂಗಳೂರು, ಉಡುಪಿ ಭಾಗದಲ್ಲಿ ಮೀನು ಖಾದ್ಯದ ಹೋಟೆಲ್‍ಗಳು ಯಶಸ್ಸು ಪಡೆದುಕೊಂಡಿದ್ದು, ಕುಂದಾಪುರ ಭಾಗದಲ್ಲಿ ಉತ್ತಮ ಗುಣಮಟ್ಟದ ಮೀನು ಖಾದ್ಯ ಹಾಗೂ ಆಹಾರವನ್ನು ಉತ್ತಮ ಸೇವೆಯೊಂದಿಗೆ ಜನರಿಗೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ‘ಫಿಶ್ ನ್ ಕರಿ’ ರೆಸ್ಟೋರೆಂಟ್‍ನಲ್ಲಿ ಮೀನಿನ ಖಾದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಜನರಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಅತಿ ಕಡಿಮೆ ದರದಲ್ಲಿ ಮೀನು ಊಟ, ಸಮುದ್ರದ ತಾಜಾ ಮೀನುಗಳ ರುಚಿಕರ ಮೀನು ಖಾದ್ಯಗಳನ್ನು ಜನರಿಗೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ ಶುಭಾಶಂಸನೆಗೈದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಘುರಾಮ ದೇವಾಡಿಗ, ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಸಹನಾ ಗ್ರೂಪ್‍ನ ಆಡಳಿತ ನಿರ್ದೇಶಕಿ ಸಹನಾ ಎಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here