ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಲೈಟ್‍ಹೌಸ್ ಗಂಗೊಳ್ಳಿ ಇವರ ಸಹಯೋಗದೊಂದಿಗೆ ರಚನೆಯಾಗಿರುವ ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿಯ ನೂತನ ಅಧ್ಯಕ್ಷರಾಗಿ ಜಯಂತಿ ಜಿ. ಖಾರ್ವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾರದಾ ಡಿ. ಖಾರ್ವಿ, ಕಾರ್ಯದರ್ಶಿಯಾಗಿ ಎಂ. ರೇಖಾ ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ಕಮಲ ಖಾರ್ವಿ, ಕೋಶಾಧಿಕಾರಿಯಾಗಿ ಸುಶೀಲಾ ಎಂ. ಖಾರ್ವಿ, ಕ್ರೀಡಾ ಕಾರ್ಯದರ್ಶಿಯಾಗಿ ಮಾನಸ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಉಷಾ ಸಮಿತಿಯ ಸದಸ್ಯರಾಗಿ ರೇಣುಕಾ, ಜರೀನಾ, ಶಕುಂತಲಾ, ಸರಸ್ಪತಿ ಎನ್., ಅಶ್ವಿನಿ, ಜ್ಯೋತಿ ಎನ್., ಶಾಂತಿ ಖಾರ್ವಿ ಮತ್ತು ಸಾವಿತ್ರಿ ಎಲ್. ಆಯ್ಕೆಯಾಗಿದ್ದಾರೆ.