ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ(ಸಿಐಟಿಯು)ದ 21ನೇ ವಾರ್ಷಿಕ ಮಹಾಸಭೆಯು ಭಾನುವಾರರಂದು ಕುಂದಾಪುರ ಹಂಚು ಕಾರ್ಮಿಕ ಭವನದಲ್ಲಿ ಜರುಗಿತು.
ಅಧ್ಯಕ್ಷರಾಗಿ ವಿ.ನರಸಿಂಹ, ಉಪಾಧ್ಯಕ್ಷರಾಗಿ ಕೆ.ಶಂಕರ್, ಜಿ.ಡಿ.ಪಂಜು,ವಾಸು ಪೂಜಾರಿ, ಸುರೇಂದ್ರ, ಪ್ರ.ಕಾರ್ಯದರ್ಶಿ ಎಚ್.ನರಸಿಂಹ, ಕೋಶಾಧಿಕಾರಿ ಪ್ರಕಾಶ ಕೋಣಿ,ಲಕ್ಷ್ಮಣ. ಜೊತೆ ಕಾರ್ಯದರ್ಶಿ ಡಿ.ಚಂದ್ರ ಪೂಜಾರಿ ಇವರನ್ನೊಳಗೊಂಡ ಎಪ್ಪತ್ತು ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.