ಕುಂದಾಪುರ: ಭಗತ್ ಸಿಂಗ್ ರ ಹುತಾತ್ಮ ದಿನಾಚರಣೆ

0
51

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಗತ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಅವರು ದೇಶದ ಸಂಪತ್ತನ್ನು ಸೃಷ್ಠಿಸುವ ಕಾರ್ಮಿಕರ ಪರವಾದ ಹೋರಾಟವನ್ನು ನಡೆಸಿದರು ಎಂಬುವುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಡಿವೈಎಫ್ಐ ತಾಲೂಕು ಉಪಾಧ್ಯಕ್ಷ ರವಿ ವಿ ಎಂ. ಹೇಳಿದರು.

ಅವರು ಕುಂದಾಪುರ ಬಿ.ಸಿ ರಸ್ತೆಯ ಅಕ್ಷರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Click Here

Click Here

ಬ್ರಿಟೀಷ್ ಸರ್ಕಾರ ಕಾರ್ಮಿಕ ವಿರೋಧಿ ಮಸೂದೆ ತಂದಾಗ ಅಸೆಂಬ್ಲಿಗೆ ಮಾರುವೇಷದಲ್ಲಿ ಬಟುಕೇಶ್ವರ ದತ್ ಜೊತೆ ಹುಸಿ ಬಾಂಬ್ ಸಿಡಿಸಿ ಬಂಧನಕ್ಕೋಳಗಾದರು ಇಂದು ಸ್ವದೇಶಿ ಸರ್ಕಾರಗಳು ಈ ದೇಶದ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಎಪ್ರಿಲ್ 01 ರಿಂದ ಮಸೂದೆ ಜಾರಿಗೆ ಪ್ರಯತ್ನಿಸುತ್ತಿವೆ ಈ ಮಸೂದೆಗೆ ವಿರೋಧ ಪಕ್ಷವು ವಿರೋಧಿಸದೇ ಅನುಕೂಲ ಮಾಡಿಕೊಡುತ್ತಿವೆ ಇದರ ವಿರುದ್ಧ ಹೋರಾಟ ಕಾರ್ಮಿಕ ವರ್ಗ ಹೋರಾಟ ತೀವ್ರ ಗೊಳಿಸಬೇಕಾಗಿದೆ ಎಂದು ಹೇಳಿದರು.

ಡಿವೈಎಫ್ಐ ಮುಖಂಡ ಉದಯ ಟೈಲರ್ ಸ್ವಾಗತಿಸಿದರು. ಮಂಜುನಾಥ್ ಶೋಗನ್ ವಂದಿಸಿದರು.

Click Here

LEAVE A REPLY

Please enter your comment!
Please enter your name here