ಪರಿಷತ್‌ ಚುನಾವಣೆ – ಕೋಟ ಶ್ರೀನಿವಾಸ್‌ ಪೂಜಾರಿ 4ನೇ ಭಾರಿ ಗೆಲುವು, ಮಂಜುನಾಥ್‌ ಭಂಡಾರಿ ಪ್ರಥಮ ಬಾರಿ ಪರಿಷತ್’ಗೆ

0
617

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ದ.ಕ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್‌‌‌ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌‌‌ ಭಂಡಾರಿ ಗೆಲುವು ಸಾಧಿಸಿದ್ದಾರೆ.

ಒಟ್ಟು 389 ಮತಗಟ್ಟೆಗಳ 6,011 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು 3,672 ಗಳಿಸಿದ್ದು, ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರು 2,079 ಮತ ಗಳಿಸಿದ್ದಾರೆ. ಇಬ್ಬರು ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ಧಾರೆ.

ಇನ್ನು ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಅವರು 204 ಮತಗಳನ್ನು ಗಳಿಸಿದ್ದಾರೆ.

Click Here

Click Here

ಒಟ್ಟು 6,011 ಮತ ಚಲಾವಣೆಯಾಗಿದ್ದು, ಈ ಪೈಕಿ ಈ ಪೈಕಿ 5,955 ಸಿಂಧು ಮತಗಳು ಚಲಾವಣೆಯಾಗಿದ್ದು, 56 ಅಸಿಂಧು ಮತಗಳಾಗಿವೆ.

ಈ ಗೆಲುವಿನ ಮೂಲಕ ಕೋಟ ಶ್ರೀನಿವಾಸ ಪೂಜಾರಿ ಅವರು ಸತತ ನಾಲ್ಕನೇ ಬಾರಿಗೆ ಪರಿಷತ್‌ ಪ್ರವೇಶ ಮಾಡಿದ್ದಾರೆ.

Click Here

LEAVE A REPLY

Please enter your comment!
Please enter your name here