ಕೋಟ ಪದವಿ ಕಾಲೇಜಿನಲ್ಲಿ ಕೃಷಿ ಉದ್ಯಮ ಅಭಿವೃದ್ಧಿ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣ

0
143

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ಡಿಜಿಟಲೀಕರಣಗೊಳ್ಳುತ್ತಿದೆ ಆದರೆ ಕೃಷಿ ಕ್ಷೇತ್ರದ ಬೆಳವಣಿಗೆಯ ದರ ಅಷ್ಟೊಂದು ತೃಪ್ತಿಕರವಾಗಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಕ್ರಮ ಕೈಗೊಳ್ಳುತ್ತಿವೆ. ಕೃಷಿ ಉದ್ಯಮದ ಮೂಲಕ ಸಮೃದ್ಧ ಗ್ರಾಮವನ್ನು ರೂಪಿಸಲು ಸರ್ಕಾರದ ಕೃಷಿ ಉದ್ಯಮ ಕಾರ್ಯಕ್ರಮ ನೆರವಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಇತ್ತೀಚಿಗೆ ಕೋಟದ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ, ಸಂಶೋಧನಾ ಘಟಕ, ಅಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ವಿಭಾಗಗಳೊಂದಿಗೆ ಸಿ.ಎಂ.ಡಿ.ಆರ್ , ಗೀತಾನಂದ ಫೌಂಡೇಶನ್ ಮಣೂರು ಮತ್ತು ಕಿನಾರ ಮೀನು ಕೃಷಿ ಉತ್ಪಾದಕರ ಕಂಪನಿಯ ಸಹಭಾಗಿತ್ವದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಕೃಷಿ ಉದ್ಯಮಶೀಲತೆಯ ಮೂಲಕ ಗ್ರಾಮೀಣ ಸಮೃದ್ಧಿ ಉತ್ತೇಜಿಸುವುದು ಎಂಬ ಶೀರ್ಷಿಕೆಯ ಅಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತು.

ಸಭೆಯಲ್ಲಿ ರಾಷ್ಟ್ರಮಟ್ಟದ ಈ ವಿಚಾರ ಸಂಕಿರಣದಲ್ಲಿ ನಡೆದ ನಾಲ್ಕು ಅಧಿವೇಶನಗಳಲ್ಲಿ ನಡೆದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಕೃಷಿ ಡಿಜಿಟಲೀಕರಣದ ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಬಗ್ಗೆ ಜೈಪುರಿಯನ್ ವಿಶ್ವವಿದ್ಯಾನಿಲಯ, ರಾಜಸ್ಥಾನ ಇದರ ಸಹ ಪ್ರಾಧ್ಯಾಪಕ ಡಾ. ಗಣಶ್ಯಾಮ್ ಪಾಂಡ್ಯ ಪ್ರಬಂಧ ಮಂಡನೆ ಮಾಡಿದರು.

ವಿಕಸಿತ ಭಾರತಕ್ಕಾಗಿ ಕೃಷಿ ಉದ್ಯಮಶೀಲತೆ ಎಂಬ ವಿಷಯದ ಬಗ್ಗೆ ಎಸ್. ಡಿ. ಎಂ. ಕಾಲೇಜು ಉಜಿರೆ ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್ ಇವರು ತಮ್ಮ ವಿಚಾರವನ್ನು ಮಂಡಿಸಿದರು.

Click Here

Click Here

ಗುಜರಾತ್ ಇನಸ್ಟಿಟ್ಯೂಟ್ ಆಫ್ ಡೆವೆಲಪ್ ಮೆಂಟ್ ರೀಸರ್ಚ್‍ರ್ ಡಾ. ರುದ್ರನಾರಾಯಣ ಮಿಶ್ರ ಕೃಷಿ ಕ್ಷೇತ್ರದಲ್ಲಿ ಮಹಿಳಾ ಉದ್ಯಮಶೀಲತೆ ಎಂಬ ವಿಷಯದ ಬಗ್ಗೆ ಇವರು ತಮ್ಮ ವಿಷಯವನ್ನು ಮಂಡಿಸಿದರು.

ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೋಷಿಯಲ್ ಎಕನಾಮಿಕ್ ಚೇಂಜ್ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ತಿಕ್ ಕೃಷಿ ಉದ್ಯಮಕ್ಕೆ ಸಾಲ ಸೌಲಭ್ಯದಲ್ಲಿರುವ ಸವಾಲುಗಳು ಎಂಬ ವಿಷಯದ ಬಗ್ಗೆ ಇವರು ತಮ್ಮ ಪ್ರಬಂಧ ಮಂಡನೆ ಮಾಡಿದರು.

ಸಮಾರಂಭವನ್ನು ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತನಾಡಿ ಕೃಷಿ ಕುಟುಂಬಗಳು ಕೃಷಿ ಉದ್ಯಮಕ್ಕೆ ಸಂಬಂಧಿಸಿದಂತೆ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ದಿಕ್ಸೂಚಿ ಭಾಷಣಕಾರರಾದ ಡಾ. ಶಿವಕುಮಾರ್ ಮಗದ, ಪ್ರಾಧ್ಯಾಪಕರು, ಜಲಜೀವ ಶಾಸ್ತ್ರ, ಫಿಶರೀಸ್ ಕಾಲೇಜು, ಮಂಗಳೂರು ಇವರು ಕೃಷಿ ಉದ್ಯಮದಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ರಾಜೇಂದ್ರ ಎಸ್. ನಾಯಕ ವಹಿಸಿದರು. ಸಂಶೋಧನಾ ಘಟಕದ ಸಂಚಾಲಕಿ ಪ್ರೋ. ಸುನೀತಾ ವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ರಮೇಶ ಆಚಾರ್, ಉಡುಪಿ ಕಿನಾರ ಮೀನು ಕೃಷಿಕರ ಉತ್ಪಾದಕರ ಕಂಪನಿ ನಿರ್ದೇಶಕ ಸುದಿನ ಉಪಸ್ಥಿತರಿದ್ದರು.

ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಸುಬ್ರಮಣ್ಯ, ಸ್ವಾಗತಿಸಿದರು. ಸಹ ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೋ. ಸುನೀತಾ ವಿ. ವಂದಿಸಿದರು.

Click Here

LEAVE A REPLY

Please enter your comment!
Please enter your name here