ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟ ಮಣೂರು ಪಡುಕರೆ ಶ್ರೀ ಉದ್ಬವಲಿಂಗೇಶ್ವರ ಭಜನಾ ಮಂದಿರ 39ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಉದ್ಭವಲಿಂಗೇಶ್ವರ ವಠಾರದಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಭಜನೋತ್ಸವ ವೈಭವದಿಂದ ಜರಗಿತು.
ಮೊದಲ ದಿನ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಕೋಟದ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ ಸಿ ಕುಂದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ನವೀನ ಕುಮಾರ್, ಗೌರವ ಅಧ್ಯಕ್ಷ ಹರೀಶ್ ಕುಮಾರ, ಕೋಟ ಮೆಸ್ಕಾಂನ ದಿನೇಶ ಪುತ್ರನ್ ವಿಠಲವಾಡಿ, ಭಜನಾ ಮಂದಿರದ ಪ್ರಮುಖರಾದ ಪ್ರಮೋದ್, ವಿಜಯ ವಿನಯ, ಚೈತ್ರ , ಯೊಗೇಶ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 6 ಭಜನಾ ತಂಡಗಳು ಭಾಗವಹಿಸಿದವು.
ಎರಡನೇಯ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ ಕೊಡ್ಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿಸಾಧನೆಗೈದ ಸಾಧಕರಾದ ಕ್ರೀಡಾ ಸಾಧಕಿ ಸೃಜನಾ ಎಸ್.ಪಿ, ಕೊಲ್ಲೂರು ಠಾಣೆ ಪಿಎಸ್‍ಐ ಸುಧಾರಾಣಿ, ಮೆಸ್ಕಾಂ ನೌಕರರು ಕೋಟ ಶಾಖೆ, ಸ್ಥಳೀಯ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.
ಜನಸೇವ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ, ನ್ಯಾಯವಾದಿ ಬಿ. ಎಸ್ ಕಾಳವರಕ್ಕರ್, ವಿದ್ವಾನ್ ದಾಮೋದರ್ ಶರ್ಮಾ ಉಪಸ್ಥಿತರಿದ್ದರು.