ಶ್ರೀನಿವಾಸ ಕಲ್ಯಾಣೋತ್ಸವ ಬಂಗಾರದ ಅಕ್ಷರಕ್ಕೆ ಮುನ್ನುಡಿ – ಪ್ರಮೋದ್ ಮಧ್ವರಾಜ್
ಕುಂದಾಪುರ: ಶ್ರೀನಿವಾಸ ಕಲ್ಯಾಣೋತ್ಸವ ಸಾಸ್ತಾನ ಭಾಗದಲ್ಲಿ ನಡೆಯುತ್ತಿರುವುದು ಇತಿಹಾಸದ ಪುಟಕ್ಕೆ ಸೇರುವ ಐತಿಹಾಸಿಕ ಘಟ್ಟ ಹಾಗೂ ಬಂಗಾರದ ಅಕ್ಷರದಲ್ಲಿ ಬರೆಯುವಂತೆ ಸಾಕ್ಷಿಕರಿಸಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನುಡಿದರು.
ಗುರುವಾರ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ನಲ್ಲಿ ಇದೇ ಬರುವ ಎಪ್ರಿಲ್ 1ರಿಂದ 3ರ ತನಕ ನಡೆಯಲಿರುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಇದರ ಭೂವೈಕುಂಠ ಮಹಾದ್ವಾರ ಇದನ್ನು ಉದ್ಘಾಟಿಸಿ ಮಾತನಾಡಿ ಶ್ರೀನಿವಾಸನ ಕಲ್ಯಾಣವೇ ಈ ಕಲಿಯುಗದಲ್ಲಿ ಕಣ್ತುಂಬಿಕೊಳ್ಳುವ ಭಾಗ್ಯವಾಗಿದೆ. ಈ ಕಾರ್ಯದಲ್ಲಿ ಇಡೀ ಗ್ರಾಮವೇ ಒಗ್ಗಟ್ಟಿನ ಮಂತ್ರದೊಂದಿಗೆ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.
ಇದೇ ವೇಳೆ ಆಹಾರ ಸಾಮಾಗ್ರಿ ಇರಿಸುವ ಉಗ್ರಾಣಕ್ಕೆ ಪಷ್ಭವನ್ನಿಟ್ಟು ಪ್ರಾರ್ಥನೆ ಸಲ್ಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಿತಿಯ ಹಿರಿಯರಾದ ಶಿವರಾಮ ಉಡುಪ, ಆಶಿತ ಎಂಟರ್ ಪ್ರೈಸಸ್ ಮಾಲಿಕ ಆನಂದ್ ಮರಕಾಲ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಐರೋಡಿ ಜಗದೀಶ್ ಕಾರಂತ, ಸಮಿತಿಯ ಉಪಾಧ್ಯಾಕ್ಷ ಪ್ರತಾಪ್ ಶೆಟ್ಟಿ, ಸಮಿತಿ ಪ್ರಮುಖರಾದ ರತ್ನ ಜೆ ರಾಜ್, ಲೀಲಾವತಿ ಗಂಗಾಧರ್, ಹರೀಷ್ ನಾಯಕ್ ,ದಯಾನಂದ ಶ್ಯಾನುಭಾಗ್, ಗೋವಿಂದ ಪೂಜಾರಿ, ಸುಲತಾ ಎಸ್ ಹೆಗ್ಡೆ, ನಾಗರಾಜ್ ಗಾಣಿಗ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಜ್ಯೋತಿ ಉದಯ್ ಕುಮಾರ್, ರವೀಂದ್ರ ತಿಂಗಳಾಯ, ಶ್ರೀಪತಿ ಅಧಿಕಾರಿ, ಸೀತಾರಾಮ ಆಚಾರ್, ಚೆನ್ನಯ್ಯ ಪೂಜಾರಿ, ಕುಸುಮಾ ಮನೋಜ್, ರಜನಿ ಶೈಲೇಶ್, ಸುರೇಶ್ ಪೂಜಾರಿ, ಸಮಿತಿಯ ಪ್ರಧಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಸಂಜೀವ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಿತಿಯ ಪ್ರಮುಖರಾದ ಪ್ರಶಾಂತ್ ಶೆಟ್ಟಿ ನಿರೂಪಿಸಿದರೆ, ಸಮಿತಿಯ ಮಾರ್ಗದರ್ಶಕರಾದ ಡಾ. ವಿದ್ವಾನ್ ವಿಜಯ್ ಮಂಜರ್ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ತಿಂಗಳಾಯ ವಂದಿಸಿದರು.