ಸಿಬ್ಬಂದಿಯವರಿಗೆ ತರಬೇತಿ ಕಾರ್ಯಾಗಾರ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ

0
352

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಾಗಾರ ಮತ್ತು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಡಿ.12 ರಂದು ರಾಜಲಕ್ಷ್ಮಿ ಸಭಾ ಭವನ, ಮಣೂರು ಇಲ್ಲಿ ಜರಗಿತು.

ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿವೇಕ ಪದವಿಪೂರ್ವ ಕಾಲೇಜು, ಕೋಟ ಇದರ ಪ್ರಾಂಶುಪಾಲ ಜಗದೀಶ ನಾವಡ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷೆ ಸುಶೀಲ ಸೋಮಶೇಖರ್, ಸಂಘದ ಉಪಾಧ್ಯಕ್ಷ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ ಟಿ. ಮಂಜುನಾಥ, ಡಾ. ಕೃಷ್ಣ ಕಾಂಚನ್, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ಪ್ರೇಮಾ ಎಸ್. ಪೂಜಾರಿ, ರಂಜಿತ್ ಕುಮಾರ್, ಕುಮಾರಿ ರಶ್ಮಿತಾ, ನಾಮನಿರ್ದೇಶಿತ ನಿರ್ದೇಶಕರಾದ ಗುಲಾಬಿ ಡಿ. ಬಂಗೇರ ಇವರು ಮುಖ್ಯ ಅತಿಥಿಗಳಾಗಿ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Click Here

2021ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಧುಸೂಧನ ಬಾಯರಿ, ಮಣೂರು ಮತ್ತು ಡಾ. ಪಿ. ಸಿ. ಸುಧಾಕರ ಇವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಜಯಕರ ಶೆಟ್ಟಿ, ಇಂದ್ರಾಳಿ ಮತ್ತು ಪ್ರಕಾಶ್ಚಂದ್ರ ಶೆಟ್ಟಿ ಇವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ಇದೇ ಸಂದರ್ಭ 2020-2021ನೇ ಸಾಲಿನಲ್ಲಿ ಅತ್ಯುತ್ತಮ ವ್ಯವಹಾರ ನಡೆಸಿ ಪ್ರಥಮ ಸ್ಥಾನ ಪಡೆದ ಗುಂಡ್ಮಿ ಶಾಖೆ, ದ್ವಿತೀಯ ಸ್ಥಾನ ಪಡೆದ ಸಾಲಿಗ್ರಾಮ ಶಾಖೆ ಮತ್ತು ತೃತೀಯ ಸ್ಥಾನ ಪಡೆದ ಕೋಡಿಬೆಂಗ್ರೆ ಶಾಖೆಗೆ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ನಡೆದ ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಜಯಕರ ಶೆಟ್ಟಿ, ಇಂದ್ರಾಳಿ ಇವರು ‘ಪತ್ತಿನ ಸಹಕಾರಿ ಸಂಘಗಳ ಮೂಲ ಉದ್ದೇಶ ಹಾಗೂ ವಿವಿಧ ಸೇವೆಗಳ’ ಬಗ್ಗೆ ಮತ್ತು ಪ್ರಕಾಶ್ಚಂದ್ರ ಶೆಟ್ಟಿ ಇವರು ‘ಪತ್ತಿನ ಸಹಕಾರಿ ಸಂಘಗಳಲ್ಲಿ ವೃತ್ತಿಪರತೆ’ ಬಗ್ಗೆ ಸಿಬ್ಬಂದಿಯವರ ಗಮನ ಸೆಳೆಯುವ ರೀತಿಯಲ್ಲಿ ವಿವರವಾದ ಮಾಹಿತಿಯನ್ನು ನೀಡಿದರು.

ಸಂಘದ ನಿರ್ದೇಶಕರಾದ ಟಿ. ಮಂಜುನಾಥ ಇವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here