ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಕುಂದಾಪುರ ತಾಲ್ಲೂಕು ಅಮಾಸೆಬೈಲು ವಲಯ ಹೆಂಗವಳ್ಳಿಯಲ್ಲಿ ಹಿಂಗಾರು ಯಂತ್ರ ಶ್ರೀ ನಾಟಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಸಿ.ಎಚ್.ಎಸ್.ಸಿ ಮಧ್ಯಮವಲಯದ ನಿರ್ದೇಶಕರಾದ ದಿನೇಶ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೂಲಿಯಾಳುಗಳ ಸಮಸ್ಯೆ ,ಅಧಿಕ ಖರ್ಚಿನಿಂದಾಗಿ ನಾಟಿ ಕಾರ್ಯಕ್ರಮ ಬಹಳ ಕಷ್ಟಕರವಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರ ಶ್ರೀ ಕಾರ್ಯಕ್ರಮದ ಮೂಲಕ ಭತ್ತ ನಾಟಿಗೆ ಸಂಪೂರ್ಣ ಯಂತ್ರೋಪಕರಣಗಳ ಬಳಕೆಯೊಂದಿಗೆ ಸಮಯಕ್ಕೆ ಸರಿಯಾಗಿ ಬೆಂಬಲ ನೀಡುತ್ತಿರುವುದು ಬಹಳ ಸಂತಸದ ವಿಷಯ ಎಂದರು.
ಕಾರ್ಯಕ್ರಮವನ್ನು ಪ್ರಗತಿಪರ ರೈತರಾದ ತಾಮ್ಡಿನಾಯ್ಕ್ ರವರ ಕೃಷಿ ತಾಕಿನಲ್ಲಿ ಚಾಲನೆ ನೀಡಲಾಯಿತು.
ಕೃಷಿಯಾಂತ್ರೀಕರಣ ವಿಭಾಗದ ಯೋಜನಾಧಿಕಾರಿ ಅಶೋಕ್ ಬಿ ರವರು ಮಾತನಾಡಿ ಯಂತ್ರ ಶ್ರೀ ಕಾರ್ಯಕ್ರಮದಲ್ಲಿ ಮಣ್ಣಿನ ಆಯ್ಕೆ, ಬೀಜದ ಆಯ್ಕೆ, ಬೀಜೋಪಚಾರ, ಗೊಬ್ಬರ ನೀಡುವಕ್ರಮ, ಸಸಿಮಡಿ ತಯಾರಿ, ನಾಟಿ ಕ್ರಮ,ನಿರ್ವಹಣಾ ಹಂತದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ನಂತರ ಕಿಸಾನ್ ಆಗ್ರೋಟೇಕ್ ಸಂಸ್ಥೆಯ ಪ್ರತಿನಿಧಿಯವರಿಂದ ವಿವಿಧ ಕೃಷಿಯಂತ್ರೋಪಕರಣಗಳ ಪ್ರಾತ್ಯಕ್ಷೀತೆಯೊಂದಿಗೆ ಮಾಹಿತಿ ನೀಡಿದರು.
ಹೆಂಗವಳ್ಳಿ ಒಕ್ಕೂಟದ ಅಧ್ಯಕ್ಷರಾದ ರಘುರಾಮ್ ಶೆಟ್ಟಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ದೀಪಕ್ ,ವಲಯ ಭಜನ ಪರಿಷತ್ ನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ,ಯಂತ್ರ ಶ್ರೀ ಯೋಧರಾದ ಅಶೋಕ್ ಮರಾಠಿ, ಪ್ರಗತಿಪರ ರೈತರಾದ ಸಂತೋಷ್ , ಸೇವಾ ಪ್ರತಿನಿಧಿ ಗೋವಿಂದ ಪೂಜಾರಿ, ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಕೃಷಿಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ವಲಯ ಮೇಲ್ವೀಚಾರಕ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು.