ಕುಂದಾಪುರ :ಸಂಭ್ರಮದ ಈದುಲ್ ಫಿತರ್ ಆಚರಣೆ

0
766

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮುಸ್ಲಿಮರ ಪವಿತ್ರ ಮಾಸವಾದ ರಂಝಾನ್ ತಿಂಗಳ ಉಪವಾಸ ವ್ರತಚಾರಣೆಯ ಈದುಲ್ ಫಿತರ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.

Click Here

Click Here

ಬೆಳಿಗ್ಗೆ ಕುಂದಾಪುರ ಜಾಮೀಯ ಮಸೀದಿಯಿಂದ ಹೊರಟ ಸ್ವಲಾತ್ ಮೆರವಣಿಗೆಯು ಜಮಾತ್ ಅಧ್ಯಕ್ಷರಾದ ವಸೀಮ್ ಬಾಷಾ, ಪದಾಧಿಕಾರಿಗಳಾದ ತಬರೇಜ್, ಪುರಸಭಾ ಸದಸ್ಯ ಎಂ.ಅಬು ಮಹ್ಮದ್ ಮುಂತಾದವರ ಮುಂದಾಳತ್ವದಲ್ಲಿ ಮುಖ್ಯ ಬೀದಿಯ ಮೂಲಕ ಸಾಗಿ ಈದ್ಗಾ ಮೈದಾನವನ್ನು ತಲುಪಿತು. ಜಮಾತಿನ ಖತೀಬರಾದ ಶಾಹೀದ್ ಹುಸೇನ್ ಅವರು ಈದ್ ನಮಾಜ್ ನೆರವೇರಿಸಿ ಸಕಲರ ಕಲ್ಯಾಣ, ಶಾಂತಿ, ನೆಮ್ಮದಿಗಾಗಿ ದುವಾ ಮಾಡಿದರು.

ಇದೇ ಸಂದರ್ಭದಲ್ಲಿ ಈದ್ಗ ಮೈದಾನಕ್ಕೆ ಭೇಟಿ ನೀಡಿದ ಕುಂದಾಪುರ ಚರ್ಚ್ ಗುರುಗಳಾದ ರೆ. ಫಾ. ಪೌಲ್ ರೇಗೋ ಅವರು ಶಾಂತಿ, ಸಹೋದರತೆಯ ಸಂದೇಶ ಸಾರುವ ಈದ್ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಕುಂದಾಪುರ ಕೆಥೋಲಿಕ್ ಸಭಾದ ವಲಯ ಅಧ್ಯಕ್ಷ ವಿಲ್ಸನ್ ಡಿ. ಅಲ್ಮೆಡಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶಾಲೇಟ್ ಫೆರ್ನಾಂಡಿಸ್, ಮುಸ್ಲಿಂ ಹಿರಿಯರಾದ ಏ. ಕೆ. ಅಬ್ದುಲ್ ಖಾದರ್ ಯೂಸುಫ್, ಶೇಕ್ ಫರೀದ್ ಬಾಷಾ, ಬಿ. ಹಾರೂನ್ ಸಾಹೇಬ್ ಹಾಗೂ ಇತರ ಧುರೀಣರು ಉಪಸ್ಥಿತರಿದ್ದು ಸರ್ವರಿಗೂ ಈದ್ ಶುಭಾಶಯಗಳನ್ನು ಕೋರಿದರು.

Click Here

LEAVE A REPLY

Please enter your comment!
Please enter your name here