ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಕುಂದಾಪುರ ತಾಲ್ಲೋಕು, ಹಾಲಾಡಿ ವಲಯ ಬೆಳ್ವೆ ಕಾರ್ಯಕ್ಷೇತ್ರ, ಲಯನ್ಸ್ ಕ್ಲಬ್ ಬೆಳ್ವೆ-ಆರ್ಡಿ-ಗೋಳಿಯಂಗಡಿ ಹಾಗೂ ವ್ಯವಸಾಯ ಸೇವಾಸಹಕಾರಿ ಸಂಘ ಬೆಳ್ವೆ ಇವರ ಸಂಯುಕ್ತ ಆಶ್ರಯದಲ್ಲಿ ಯಂತ್ರ ಶ್ರೀ ಕೃಷಿಯಂತ್ರೋಪಕರಣಗಳ ಬಳಕೆ, ಕೃಷಿ ಅನುದಾನ ಪತ್ರ ವಿತರಣೆ, ಸಸಿವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೃಷಿಯತ್ತ ಯುವ ಪೀಳಿಗೆಯವರು ಚಿತ್ತ ಹರಿಸಬೇಕು ಎಂದು ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕರಾದ ಗಣೇಶ್ ಬಿ ರವರು ತಿಳಿಸಿದರು.
ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಹವಾಮಾನದ ವೈಪರಿತ್ಯ, ಕೂಲಿಯಾಳುಗಳ ಸಮಸ್ಯೆ ಇತ್ಯಾದಿ ಕಾರಣಗಳಿಂದಾಗಿ ಸರಿಯಾದ ಸಮಯದಲ್ಲಿ ನಾಟಿ ಕಾರ್ಯಕ್ರಮ ಬಹಳ ಕಷ್ಟಕರವಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಂತ್ರ ಶ್ರೀ ಕಾರ್ಯಕ್ರಮದ ಮೂಲಕ ಭತ್ತ ನಾಟಿಗೆ ಸಮಯಕ್ಕೆ ಸರಿಯಾಗಿ ಯಂತ್ರಗಳನ್ನು ಯೋಜನೆಯ ಮೂಲಕ ಸಕಾಲದಲ್ಲಿ ರೈತರಿಗೆ ನಾಟಿಗೆ ಒದಗಿಸಲಾಗುತ್ತಿರುವುದು ಬಹಳ ಸಂತಸದ ವಿಷಯ. ಈ ಭಾಗದ ರೈತರು ಯೋಜನೆಯ ಯಂತ್ರಧಾರಾ ಕೇಂದ್ರದಲ್ಲಿರುವ ಯಂತ್ರಗಳನ್ನು ಸರಿಯಾಗಿ ಬಳಸಿಕೊಳ್ಳಿರಿ ಎಂದರು.
ಉಡುಪಿ ಕೃಷಿಯಾಂತೃೀಕರಣ ವಿಭಾಗದ ಯೋಜನಾಧಿಕಾರಿ ಅಶೋಕ್ ಬಿ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಯಂತ್ರ ಶ್ರೀ ಕಾರ್ಯಕ್ರಮಗಳ ಪ್ರಯೋಜನಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿ.ಎಚ್.ಎಸ್.ಸಿ ಮಧ್ಯಮವಲಯದ ನಿರ್ದೇಶಕರಾದ ದಿನೇಶ್, ವ್ಯವಸಾಯ ಸೇವಾಸಹಕಾರಿ ಸಂಘ ಬೆಳ್ವೆಯ ಅಧ್ಯಕ್ಷರಾದ ಜಯರಾಂ ಶೆಟ್ಟಿ,ನಿರ್ದೇಶಕರಾದ ಹರೀಶ್ ಕಿಣಿ,ಲಯನ್ಸ್ ಕ್ಲಬ್ , ಬೆಳ್ವೆ-ಆರ್ಡಿ-ಗೋಳಿಯಂಗಡಿ ಇದರ ಸದಸ್ಯರಾದ ವಸಂತ್ ಶೆಟ್ಟಿ, ನಿವೃತ್ತ ಸೈನಿಕರಾದ ವಾಸು ಪೂಜಾರಿ, ಯಂತ್ರ ಶ್ರೀ ಯೋಧರಾದ ಕೃಷ್ಣನಾಯ್ಕ್, ಸೇವಾಪ್ರತಿನಿಧಿ ಶ್ರೀಮತಿ ಉಪಸ್ಥಿತರಿದ್ದರು.
ಬೆಳ್ವೆ ಒಕ್ಕೂಟದ ಅಧ್ಯಕ್ಷರಾದ ವಾಸು ಪೂಜಾರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವು ಪ್ರಗತಿಪರ ಕೃಷಿಕರಾದ ಸುಮನಕೃಷ್ಣನಾಯ್ಕ್ ರವರ ಮನೆಯಲ್ಲಿ ನಡೆಯಿತು. ಕೃಷಿಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಲಯ ಮೇಲ್ವೀಚಾರಕರಾದ ಸಂತೋಷ್ ನಾಯ್ಕ್ ಸ್ವಾಗತಿಸಿ,ಸೇವಾಪ್ರತಿನಿಧಿ ಪ್ರಶಾಂತ್ ವಂದಿಸಿದರು.