ಅಂಪಾರು :ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ – ಗ್ರಾಜುಯೇಷನ್ ಡೇ

0
374

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಗು ಕಲಿಕೆಯನ್ನು ಸ್ವಚ್ಛಂದವಾಗಿ ಕಲಿಯಬೇಕು ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿ. ಸತ್ಸಂಸ್ಕೃತಿ – ಸಂಸ್ಕಾರದ ಭದ್ರ ತಳಹದಿಯಲ್ಲಿ ಮೌಲ್ಯಯುತ, ಗುಣಮಟ್ಟದ ಶಿಕ್ಷಣವನ್ನು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ನೀಡುತ್ತಿದೆ ಎಂದು ಮಾತಾ ಮಾಂಟೆಸ್ಸರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಹಾಗೂ ಮಕ್ಕಳ ಮನೋವಿಜ್ಞಾನ ತಜ್ಞೆ ಭಾರತಿ ಪಿ ಶೆಟ್ಟಿ ಹೇಳಿದರು.

ಅವರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು ಇಲ್ಲಿನ ಕಿಂಡರ್ಗಾರ್ಟನ್ ವಿಭಾಗದ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಪದವಿ ಪ್ರದಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಪದವಿ ಪ್ರದಾನ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಉದ್ಯಮಿ, ಅಂಪಾರಿನ ಅನೇಕ ಸಮಾಜ ಸೇವಾ ಸಂಘಟನೆಗಳ ಸ್ಥಾಪಕರು ಹಾಗೂ ಪೋಷಕರು ಆದ ಕುಪ್ಕೋಡು ಗಣಪಯ್ಯ ಶೆಟ್ಟಿ ಇವರು ನೆರವೇರಿಸಿ ಇಂದಿನ ದಿನಗಳಲ್ಲಿ ಮನೆಯ ಹಿರಿಯರ ಬಗ್ಗೆ ಗೌರವ ಪ್ರೀತಿ, ಕಾಳಜಿ ತೋರುವ ಪರಿಪಾಠ ಮಕ್ಕಳಲ್ಲಿ ಬೆಳೆಸಬೇಕು. ಈ ದಿನ ಮಕ್ಕಳ ಸಾಧನೆ, ಸಂಭ್ರಮ ಕಣ್ತುಂಬಿಕೊಳ್ಳಲು ಅಜ್ಜ , ಅಜ್ಜಿಯರನ್ನು ಆಹ್ವಾನಿಸಿರುವುದು ಶ್ಲಾಘನೀಯ ಎಂದು ಹೇಳುತ್ತಾ ಶಾಲೆಯ ಇನ್ನಿತರ ಕಾರ್ಯ ಚಟುವಟಿಕೆಗಳನ್ನೂ ಪ್ರಶಂಸಿಸಿದರು.

Click Here

Click Here

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ವಹಿಸಿದ್ದರು.

ವೇದಿಕೆಯಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಶಾನ್ಕಟ್ಟು ನವೀನ್ ಕುಮಾರ್ ಶೆಟ್ಟಿ , ಖಜಾಂಚಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮತ್ತು ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಇವರು ಉಪಸ್ಥಿತರಿದ್ದರು.

ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿ ಮತ್ತು ಶಿಕ್ಷಕಿ ಚೈತ್ರ ಶೆಟ್ಟಿ ವಂದಿಸಿದರು.

ಕಿಂಡರ್ಗಾರ್ಟನ್ ಶಿಕ್ಷಕಿಯರಾದ ಶೋಭಾ ಹಾಗೂ ಶ್ವೇತ ಇವರ ಮಾರ್ಗದರ್ಶನದಲ್ಲಿ ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು.

ಇದೆ ವೇಳೆಗೆ ಪುಟಾಣಿ ಮಕ್ಕಳು ತಮ್ಮ ಅಜ್ಜ – ಅಜ್ಜಿಯಯರಿಗೆ ಸಿಹಿ ತಿನ್ನಿಸಿ ಪಾದಕೆರಗುವ ಕ್ಷಣ ನೆರೆದವರನ್ನು ಬಾವುಕರನ್ನಾಗಿಸಿತು.

Click Here

LEAVE A REPLY

Please enter your comment!
Please enter your name here