ಕುಂದಾಪುರ ಮಿರರ್ ಸುದ್ದಿ…
ಕೋಟ: ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಯೋಜನೆಯ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಮಹೋನ್ನತ ಸಾಧಕರಿಗೆ ಕೊಡಮಾಡುವ ಕೀರ್ತಿ ಕಲಶ ಮಹಾಗೌರವಕ್ಕೆ ಈ ಬಾರಿ ಬಸ್ರೂರು ಬಳಕೆದಾರರ ವೇದಿಕೆಯ ಸಂಚಾಲಕ ಡಾ| ರವೀಂದ್ರನಾಥ್ ಶಾನುಭಾಗ್ ಆಯ್ಕೆಯಾಗಿದ್ದಾರೆ.
2022 ಫೆ. 26ರಂದು ಮೂಡುಗಿಳಿಯಾರಿನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭ ಡಾ.ನಾಗೇಶ್(ವೈದ್ಯಕೀಯ ಕ್ಷೇತ್ರ), ತೆಕ್ಕಟ್ಟೆ ಫ್ರೆಂಡ್ಸ್ (ರಿ) ತೆಕ್ಕಟ್ಟೆ ,(ಸಮಾಜ ಸೇವೆ)ಹಾಗೂ ಪತ್ರಕರ್ತ ಸತೀಶ ಬಿಲ್ಲಾಡಿ (ಮಾಧ್ಯಮ ಕ್ಷೇತ್ರ) ಇವರಿಗೆ ಯಶೋಗಾಥೆ ಗೌರವ ಸಲ್ಲಿಸಲಾಗುವುದು ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.