ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಐಟಿ ಮತ್ತು ಕಾಮರ್ಸ್ ಫೆಸ್ಟ್ ‘ಪ್ರವೇಗ – 2025’ ಯಶಸ್ವಿಯಾಗಿ ಸಂಪನ್ನಗೊಂಡಿತು.
ಐ.ಎಂ.ಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕೃಷ್ಣ ಕ್ಯಾಶ್ಯೂ ಇಂಡಸ್ಟ್ರಿಯ ಮಾಲೀಕರಾದ ಸಂಪತ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ,ನಿಮ್ಮ ಶಿಕ್ಷಣ ಮುಗಿದ ನಂತರ ನಿಮ್ಮ ನಿಜ ಜೀವನ ಆರಂಭವಾಗುತ್ತದೆ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಲು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳೆಂದರೆ ಕನಸು ಕಾಣಬೇಕು, ಮುಂದಿನ ದಿನಗಳಲ್ಲಿ ಅದು ಗುರಿಯಾಗಿ ಬದಲಾಗಬೇಕು. ಜೊತೆಗೆ ಆತ್ಮಸ್ಥೈರ್ಯವಿರಬೇಕು, ಪೂರ್ವ ಯೋಜನೆ ಹೊಂದಿರಬೇಕು. ಸರಿಯಾದ ಸಮಯಕ್ಕೆ ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸತತ ಪರಿಶ್ರಮ ಪಟ್ಟು, ಯಶಸ್ವಿ ವ್ಯಕ್ತಿಯಾಗಿ ಸಮಾಜದ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಸೇವೆ ನೀಡಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ರವರು ಇಂದಿನ ಸಂಪನ್ಮೂಲ ವ್ಯಕ್ತಿ ತೆರೆದ ವ್ಯಕ್ತಿತ್ವ ಹೊಂದಿದವರು. ಅವರ ವ್ಯಕ್ತಿತ್ವ ನಮಗೆ ದಾರಿದೀಪ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶ್ರೀಕೃಷ್ಣ ಕ್ಯಾಶ್ಯೂ ಇಂಡಸ್ಟ್ರಿಯ ಜನರಲ್ ಮ್ಯಾನೇಜರ್ ಸುಹಾಸ್ ಶೆಟ್ಟಿ, ಎಚ್ ಆರ್ ಮ್ಯಾನೇಜರ್ ಚಂದ್ರಶೇಖರ್, ಅಸಿಸ್ಟೆಂಟ್ ಮ್ಯಾನೇಜರ್ ಪರಾಗ್ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅರ್ಚನ ಗದ್ದೆ, ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವರ್ಣ ರಾಣಿ, ಐ ಐ ಸಿ ಸಂಯೋಜಕರು, ಗಣಕಶಾಸ್ತ್ರ ಉಪನ್ಯಾಸಕರಾದ ಜಿತೇಶ್ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳನ್ನು ಸಭೆಗೆ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶಿಲ್ಪಶ್ರೀ ಅವರು ಪರಿಚಯಿಸಿದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಂಕಿತ ಶಣೈ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ’ಪ್ರವೇಗ 2025’ರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಾಚನವನ್ನು ಗಣಕಶಾಸ್ತ್ರ ಉಪನ್ಯಾಸಕಿ ನಿಶ್ಮಿ ರೈ ವಾಚಿಸಿದರು. ಗಣಕಶಾಸ್ತ್ರ ಉಪನ್ಯಾಸಕಿ ಶ್ರೀನಿಧಿ ವಂದಿಸಿದರು. ಕಾರ್ಯಕ್ರಮ ಗಣಕಶಾಸ್ತ್ರ ಉಪನ್ಯಾಸಕಿ ನಾಫಿಯಾ ಅಕ್ತಾರಿಯವರು ನಿರೂಪಿಸಿದರು.