ಕೋಟದ ಪಂಚವರ್ಣದ 250ನೇ ವಾರದ ಸ್ವಚ್ಛತಾ ಅಭಿಯಾನ

0
298

ಮನುಕುಲದ ನಿದ್ದಿಗೆಡಿಸುತ್ತಿದೆ ಪ್ಲಾಸ್ಟಿಕ್ ತ್ಯಾಜ್ಯ- ಮಲ್ತೇಶ್ ಅಳಲಗೇರಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ಲಾಸ್ಟಿಕ್ ಯಾವತ್ತು ಈ ಭೂಮಿಯ ಮೇಲೆ ಹುಟ್ಟಿಕೊಂಡಿತು ಆ ದಿನಗಳಿಂದ ಇಲ್ಲಿಯವರೆಗೆ ಭೂ ಭಾಗಕ್ಕೆ ಕಂಠಕವಾಗಿ ಪರಿಣಮಿಸಿದೆ ಇದು ಮನುಕುಲದ ನಿದ್ದೆಗೆಡಿಸುತ್ತಿದೆ. ಮನುಷ್ಯನಿಂದಲೇ ಸೃಷ್ಠಿ ಮನುಕುಲಕ್ಕೆ ಆಪತ್ತು ಸೃಷ್ಠಿಸುವ ಪ್ಲಾಸ್ಟಿಕ್ ಇಂದು ಜಲಮಾತೆಯನ್ನು ಬೆಂಬಿಡದ ಭೂತದಂತೆ ನದಿ ಸಮುದ್ರ ಜಲಚರ ಜೀವಿಗಳಿಗೆ ಸಂಕಷ್ಟವನ್ನು ತಂದದೊಡ್ಡಿದೆ ಇದರ ಬಗ್ಗೆ ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ಕ್ಲಿಷ್ಟಕರ ದಿನಗಳನ್ನುಎದುರು ನೋಡುವಂತ್ತಾಗಿದೆ ಎಂದು ಅರಣ್ಯ ಇಲಾಖೆ ಉಡುಪಿ ವಲಯ ಇದರ ಅಧಿಕಾರಿ ಮಲ್ತೇಶ್ ಅಳಲಗಿರಿ ಕಿವಿಮಾತು ಹೇಳಿದರು.

Click Here

Click Here

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಪಂಚವರ್ಣ ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ಜೆಸಿಐ ಸಿನಿಯರ್ ಕೋಟ ಲಿಜನ್, ಕೋಟತಟ್ಟು ಗ್ರಾ.ಪಂ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ಉಡುಪಿ ವಲಯ ಸಂಯೋಜನೆಯೊಂದಿಗೆ ಕೋಟತಟ್ಟು ಪಡುಕರೆ ಬೀಚ್‍ನಲ್ಲಿ 250ನೇ ಭಾನುವಾರದ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತಾ ಸಂದೇಶ ನೀಡಿ ಮಾತನಾಡಿ ಪಂಚವರ್ಣದಂತ ಸಂಸ್ಥೆಗಳು ಈ ವ್ಯವಸ್ಥೆಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಳ್ಳಬೇಕು ಆಗ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರಲ್ಲದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಎಸೆಯಬೇಡಿ ಪ್ರಕೃತಿಯನ್ನು ಭಕ್ತಭಾವದಲ್ಲಿ ನೋಡವಂತ್ತರಾಗಿ ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ ಉಡುಪಿ ವಲಯ ಅರಣ್ಯ ಇಲಖೆಯ ಅಧಿಕಾರಿಗಳಾದ ಉದಯ್ ಕುಮಾರ್, ರಮೇಶ್ ಕೋಟ, ಶ್ರೀನಿವಾಸ ಜೋಗಿ, ಪಂಚವರ್ಣಯುವಕಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭ ಕೆ ಹಂದಟ್ಟು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Click Here

LEAVE A REPLY

Please enter your comment!
Please enter your name here