ಉಡುಪಿ ನನಗೆ ತವರು ಮನೆ – ಪದ್ಮಶ್ರೀ ಡಾ.ಬಿ.ಮಂಜಮ್ಮ ಜೋಗತಿ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಳ್ಳಾರಿಯವಳಾದರೂ ನನಗೆ ಉಡುಪಿ ಜಿಲ್ಲೆ ಮನೆಮಗಳಾಗಿ ಕಾಣುತ್ತಿದ್ದಾರೆ ಇದಕ್ಕಿಂತ ಖುಶಿ ಇನ್ನೆನು ಬೇಕು ಎಂದು ಜಾನಪದ ಕಲಾವಿದೆ ಪದ್ಮಶ್ರೀ ಡಾ.ಬಿ. ಮಂಜಮ್ಮ ಜೋಗತಿ ಸಂತಸ ಹಂಚಿಕೊಂಡ ಕ್ಷಣ ಕೋಡಿ ಕನ್ಯಾಣದಲ್ಲಿ ನಡೆಯಿತು.
ಶನಿವಾರ ಕೋಡಿ ಕನ್ಯಾಣದಲ್ಲಿ ಶ್ರೀರಾಮ ಮಂದಿರದ ವಠಾರದಲ್ಲಿ ಶ್ರೀ ರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇದರ ಆಶ್ರಯದಲ್ಲಿ ತೃತೀಯ ವರ್ಷದ ಶ್ರೀ ರಾಮ ಪರ್ವ-2025 ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಉಡುಪಿಯಲ್ಲಿ ಸಾಕಷ್ಟು ಗೌರವ ನೀಡಿದೆ ಅದರಂತೆ ಕೋಡಿ ಕನ್ಯಾಣದ ರಾಮ ಪರ್ವ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಮಳೆಯ ನಡುವೆ ನನ್ನಗೆ ಎದೆಗುಂದದೆ ಗೌರವಿಸಿದ ಕ್ಷಣ ಎಂದು ಮರೆಯಲಾಗದ ಪುಟಕ್ಕೆ ಸೇರಿದೆ. ಇಲ್ಲಿನ ಉತ್ಸಾಹಿ ಯುವಕ ಪಡೆ ಇಡೀ ವ್ಯವಸ್ಥೆಗೆ ಮಾದರಿಯಾಗಿದೆ. ಆಡಿಕೊಳ್ಳವರಿಗೆ ತಲೆ ಕೆಡಿಸಿಕೊಳ್ಳಬೇಡಿ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಭಗವಂತ ಆಶ್ರೀವಾದ ಸದಾ ಶ್ರೀರಕ್ಷೆಯಾಗಿ ಇರುತ್ತಾನೆ ಕಲಾವಿದರನ್ನು ಗುರುತಿಸುವ ಕಾಯಕ ಶ್ರೇಷ್ಠವಾದದ್ದು ಎಂದು ಸಂತಸ ಹಂಚಿಕೊಂಡರು.
ಇದೇ ವೇಳೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ರಾಮ ಪರ್ವ 2025ರ ಪ್ರಶಸ್ತಿಯನ್ನು ಜಾನಪದ ಕಲಾವಿದೆ ಪದ್ಮಶ್ರೀ ಡಾ.ಬಿ.ಮಂಜಮ್ಮ ಜೋಗತಿರಿಗೆ ಪ್ರದಾನಿಸಿದರು.
ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಪುನಿತ್ ಪೂಜಾರಿ ವಹಿಸಿದರು.
ಮುಖ್ಯ ಅಭ್ಯಾಗತರಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್, ಶಿಕ್ಷಕ ವಿಜಯ ನಾಯರಿ, ಕೋಡಿ ರಾಮ ಪ್ರಸಾದ ಯಕ್ಷಗಾನ ಮಂಡಳಿಯ ಅಧ್ಯಕ್ಚ ಜಗನಾಥ ಅಮೀನ್, ಉದ್ಯಮಿ ಪ್ರಜ್ವಲ್ ಶೆಟ್ಟಿ, ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಮತ್ಸ್ಯೋದ್ಯಮಿ ಶಂಕರ್ ಕುಂದರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರಾಮಪರ್ವ ಅಂಗವಾಗಿ 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.
ಸದಸ್ಯ ನಿಖೀಲ್ ಕರ್ಕೇರ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಅಕ್ಷಿತ್ ಪೂಜಾರಿ ವಂದಿಸಿದರು.