ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಸ್ಪರ್ಶ ಸಾಧನೆ ಶ್ಲಾಘನೀಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಅವರು ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್‌ಸಿಂಗ್ ಯುವ ವೇದಿಕೆ ಕೋಟ ಆಶ್ರಯದಲ್ಲಿ ಮಣೂರಿನ ಡಾ.ಸತೀಶ್ ಪೂಜಾರಿ ವೇದಿಕೆಯಲ್ಲಿ ಸ್ಪರ್ಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಯಕ್ಷಗಾನ ಕಲಾವಿದ ಕೋಟ
ಸುರೇಶ್ ಅವರಿಗೆ ಹುಟ್ಟೂರು ಸಮ್ಮಾನ ನೀಡಿ ಗೌರವಿಸಿದರು.
ಬಾಳೆಬೆಟ್ಟು ಫ್ರೆಂಡ್ಸ್ ಅಧ್ಯಕ್ಷ ರತ್ನಾಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್‍ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಶಂಕರ್ ಮಂಜೇಶ್ವರ, ಧಾರ್ಮಿಕ ಸೇವಕ ಆನಂದ ದೇವಾಡಿಗ ಕೋಟ, ಬಡಗಿ ಮಹಾಬಲ ಆಚಾರ್ಯ, ಕೃಷಿಕ ಶೇಖರ ಶೆಟ್ಟಿ, ಲಕ್ಷ್ಮೀ ಮಡಿವಾಳ್ತಿ, ಸಮಾಜ ಸೇವಕ ಚಂದ್ರ ಆಚಾರ್ಯ ಕೋಟ, ವಾದ್ಯಗೋಷ್ಠಿಯ ಜಾರ್ಜ್ ವಿಲ್ಸನ್, ದರ್ಜಿ ಪ್ರಭಾಕರ ಆಚಾರ್‍ಯ, ಕಂಬಳ ಕ್ಷೇತ್ರದ ರಮೇಶ್ ಪೂಜಾರಿ, ಕೃಷಿಕ ಸತೀಶ್ ಶೆಟ್ಟಿ, ರಕ್ತದಾನಿ ದಿನೇಶ್ ಕಾಂಚನ್, ಉರಗ ರಕ್ಷಕ ವಿಜಯ ಪೂಜಾರಿಯವರನ್ನು ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ.ಶಮಂತ್ ಕುಮಾರ್, ಡಾ.ಚೈತ್ರ ಭರತ್ ಶೆಟ್ಟಿ, ಡಾ.ಗಜೇಂದ್ರ ಗುಳ್ವಾಡಿ ಅವರನ್ನು ಗೌರವಿಸಲಾಯುತು. ಪವರ್ ಮಹಿಳಾ ಸಂಘಟನೆ ಉಡುಪಿ, ಕೋಡಿಯ ಪ್ರಗತಿ ಯುವಕ ಸಂಘಕ್ಕೆ ವಿಶೇಷ ಪುರಸ್ಕಾರ ನೀಡಲಾಯಿತು.
ಸ್ಥಳೀಯ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ವಿತರಣೆ ಮತ್ತು ಅಶಕ್ತರಿಗೆ ಆರ್ಥಿಕ ನೆರವು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯಕ್ಷ ಕವಿ ಪವನ್ ಕಿರಣ್ ಕೆರೆ, ಮನೋ ವೈದ್ಯರು ಡಾ. ಪ್ರಕಾಶ್ ತೋಳಾರ್, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ್ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ,ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್.ಕುಂದರ್, ಪ್ರಥಮ ದರ್ಜೆ ಗುತ್ತಿಗೆದಾರ ಧೀರಜ್ ಹೆಜಮಾಡಿ, ಉದ್ಯಮಿ ಚೇತನ್ ಶೆಟ್ಟಿ ಬ್ರಹ್ಮಾವರ, ಚಾರ್ಟರ್ಡ್ ಅಕೌಂಟೆಂಟ್ ರಾಘವೇಂದ್ರ ಶೆಟ್ಟಿ ಕಟ್ಟೇರಿ, ಉದ್ಯಮಿ ಕುಶಲ್ ಶೆಟ್ಟಿ ಬಾಳೆಬೆಟ್ಟು, ಉದ್ಯಮಿ ಉಮೇಶ್ ಪೂಜಾರಿ ಬಾಳೆಬೆಟ್ಟು, ಕೋಟ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸದಾನಂದ ಜೀ., ಕೋಟ ಗ್ರಾ.ಪಂ.ಉಪಾಧ್ಯಕ್ಷ ಪಾಂಡು ಪೂಜಾರಿ, ಸಿವಿಲ್ ಇಂಜಿನಿಯರ್ ಮಿಥಿಲೇಶ್ ಕೋಟ, ಯುವ ಉದ್ಯಮಿ ಕಿರಣ್ ಪೂಜಾರಿ ತೆಕ್ಕಟ್ಟೆ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೊತ್ತ ಮೊದಲ ಬಾರಿಗೆ ಶಿವಾಜಿ ನಾಟಕ ಕನ್ನಡದಲ್ಲಿ ಪ್ರದರ್ಶನ ನಡೆಯಿತು.
ಭಗತ್‌ಸಿಂಗ್ ಯುವ ವೇದಿಕೆಯ ಪ್ರಸಾದ್ ಬಿಲ್ಲವ ಸ್ವಾಗತಿಸಿ, ಸ್ಪರ್ಶ ಕಾರ್ಯಕ್ರಮದ ಸಂಚಾಲಕ ಹರೀಶ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಟಿವಿ ನಿರೂಪಕ ಪ್ರಣುತ್ ಆರ್ ಗಾಣಿಗ ನಿರೂಪಿಸಿದರು