ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿ ” ಇಂದಿರಾ ಭವನ”ದಲ್ಲಿ ಡಾ! ಬಿ ಆರ್ ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೋಟ ಬ್ಲಾಕ್ ಅಧ್ಯಕ್ಷರಾದ ಶಂಕರ ಎ. ಕುಂದರ್ ಅವರು ಡಾ! ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರರು ವಿನಯ ಕುಮಾರ ಕಬ್ಬ್ಯಾಡಿ ರವರು ಮಾತನಾಡಿ ಅಂಬೇಡ್ಕರ್ ಅನ್ನುವ ಹೆಸರು ಕೇವಲ ಹೆಸರಲ್ಲ, ನಾಲ್ಕು ಜನ ನಮ್ಮನ್ನು ಕೀಳು ಅಂತ ನಮ್ಮ ಮೇಲೆ ಕಲ್ಲೆಸೆದರೆ ಆ ಕಲ್ಲುಗಳಿಂದ ಒಂದು ಸುಂದರ ಮನೆಯನ್ನು ಹೇಗೆ ಕಟ್ಟಬೇಕು ಅಂತಾ ಈ ಜಗತ್ತಿಗೆ ಹೇಳಿಕೊಟ್ಟ ಮಹನೀಯರು ಅಂಬೇಡ್ಕರ್ ಎಂದು ನುಡಿದರು.
ಅಂಬೇಡ್ಕರ್ ರವರು ನಮ್ಮಂಥ ಎಲ್ಲ ಹಿಂದುಳಿದ ವರ್ಗದ ನಾಯಕರು, ಅವರ ಆಚರಣೆ ಪ್ರತಿ ವರ್ಷಕ್ಕೆ ಮಾತ್ರ ಆಚರಿಸದೆ ಪ್ರತಿ ತಿಂಗಳು ಎಲ್ಲ ಸಂಘ ಸಂಸ್ಥೆಗಳ ಮೂಲಕ ಕಾರ್ಯಕ್ರಮ ಹಾಕಿಕೊಂಡು ಅವರ ಆದರ್ಶಗಳನ್ನ ನಾವು ಇಂದಿನ ಮಕ್ಕಳಿಗೆ ಪರಿಪಾಲನೆ ಮಾಡಿ ಕೊಳ್ಳಬೇಕು ಎಂದು ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್ ಪೂಜಾರಿ ರವರು ಅಂಬೇಡ್ಕರ್ ರವರ ಆದರ್ಶದ ನುಡಿಗಳನ್ನ ಮಾತಾಡಿದರು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ನಜೀರ್ ಬಾರ್ಕುರ್, ಅಕ್ರಮ ಸಕ್ರಮ ಸದಸ್ಯರಾದ ರಾಜೇಶ್ ಕೆ ನೆಲ್ಲಿಬೆಟ್ಟು, ಬ್ಲಾಕ್ ಕಾಂಗ್ರೆಸ್ ಇಂಟಕ್ ಅಧ್ಯಕ್ಷರಾದ ದೇವೇಂದ್ರ ಗಾಣಿಗ ಕೋಟ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀಕಾಂತ್ ಆಚಾರ್ ಪಾಂಡೇಶ್ವರ, ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿಗಾರ್, ಗಣೇಶ್ ಕೆ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಸಾಸ್ತಾನ, ರತ್ನಾಕರ್ ಶ್ರೀಯಾನ್ ಕೋಟ, ಸೂರ್ಯಕಾಂತ್ ಶೆಟ್ಟಿ ಚಿತ್ರಪಾಡಿ, ಸತೀಶ್ ಪೂಜಾರಿ ಮಣ್ಣೂರು ಪಡುಕೆರೆ, ರಾಜು ಪೂಜಾರಿ ತೋಡಕಟ್ಟು ಪಾರಂಪಳ್ಳಿ, ಅಶೋಕ್ ಬಡಹೋಳಿ, ರಘು ಭಂಡಾರಿ ಕುಂಜಿಗುಡಿ, ಯಾಶಿನ್ ಪಾರಂಪಳ್ಳಿ ಪಡುಕೆರೆ, ಜಗನಾಥ್ ಪೂಜಾರಿ ಪಾರಂಪಳ್ಳಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡರಾದ ಅಚ್ಚುತ್ ಪೂಜಾರಿ ಸ್ವಾಗತಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ವಂದಿಸಿದರು.