ಮೇ.10 ರಂದು ಬೈಂದೂರಿನಲ್ಲಿ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

0
486

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಸಿದ್ಧ ಸಮಾದಿ ಯೋಗ ಬೈಂದೂರು ವಲಯದ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜಗದೊಡೆಯ ಶ್ರೀ ಶ್ರೀನಿವಾಸ ಮತ್ತು ಶ್ರೀ ಪದ್ಮಾವತಿಯವರ ಸಾರ್ವಜನಿಕ ವೈಭವದ ಕಲ್ಯಾಣೋತ್ಸವವು ಮೇ.10 ರಂದು ಇಲ್ಲಿನ ಯಡ್ತರೆ ಗ್ರಾಮದ ನೆಲ್ಯಾಡಿ ಬೈಲಿನಲ್ಲಿ ಜರುಗಲಿದೆ ಎಂದು ಆರ್ಚಾರ್ಯ ಕೇಶವಜೀ ಹೇಳಿದರು.

ಅವರು ಮೇ.10ರಂದು ಜರುಗಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

Click Here

Click Here

ಅಂದು ಬೆಳ್ಳಿಗೆ 8.00 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಳಿಕ 9.30ರಿಂದ ಉಪ್ಪುಂದ ಶ್ರೀ ದುರ್ಗಾ ಪರಮೇಶ್ವರಿ ದೇವಾಸ್ಥಾನದಿಂದ ಕಲ್ಯಾಣೋತ್ಸವ ಸ್ಥಳಕ್ಕೆ ಪುರಮೆರವಣೆಗೆ ಮೂಖಾಂತರ ಶ್ರೀ ಶ್ರೀನಿವಾಸ ದೇವರ ಆಗಮನ ಬಳಿಕ ಕೋಟಿ ಗೋವಿಂದ ನಾಮ ಜಪಯಜ್ಞ ಅನ್ನಸಂಪರ್ಪಣೆ, ಭಜನಾ ಕಾರ್ಯಕ್ರಮಗಳು ಜರುಗಲಿದೆ. ಸಂಜೆ 5.30ರಿಂದ ಶ್ರೀ ಶ್ರೀನಿವಾಸ ಮತ್ತು ಪದ್ಮಾಮತಿ ಕಲ್ಯಾಣೋತ್ಸವ ಜರುಗಲಿದೆ.

ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಮಾತನಾಡಿ, ಬೈಂದೂರು ವಿಭಾಗದಲ್ಲಿ ಹತ್ತಾರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಸಿದ್ಧ ಸಮಾಧಿ ಯೋಗದ ಮೂಲಕ ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಇದೀಗ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಆಯೋ ಸಿರುವುದು ಸಂತಸದ ವಿಚಾರವಾಗಿದೆ ಎಂದರು.

ಈ ವೇಳೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷರಾದ ದಿವಾಕರ್ ಶೆಟ್ಟಿ, ಕಾರ್ಯದರ್ಶಿ ಸುಂದರ ಕೊಠಾರಿ ಸ್ವಾಗತ ಸಮಿತಿಯ ಪುಷ್ಪರಾಜ್ ಶೆಟ್ಟಿ ಕೃಷ್ಣ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here