ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಹಂದಟ್ಟು ಪರಿಸರದ ಚಿತ್ರಕಲಾವಿದ ಪುನಿತ್ ಪೂಜಾರಿ ಅಶ್ವಥ ಎಲ್ಲೆಯ ಮೂಲಕ ಬಿಡಿಸಿದ ವೀರಚಂದ್ರಹಾಸ ಯಕ್ಷಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದೇ ಬರುವ 18ರಂದು ತೆರೆ ಕಾಣಲಿರುವ ಹಾಗೂ ಕನ್ನಡ ಚಿತ್ರರಂಗದಲ್ಲೆ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪರಿಚಯಿಸುಲು ಮುಂದಾದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಈ ಯಕ್ಷ ಚಿತ್ರ ವೀರಚಂದ್ರಹಾಸ ಕಲಾವಿದ ಪುನಿತ್ ಅಶ್ವಥ ಮರದ ಎಲೆಯಲ್ಲಿ ವಿಶಿಷ್ಠ ರೀತಿಯಲ್ಲಿ ಬಿಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ ಅಲ್ಲದೆ ರವಿ ಬಸ್ರೂರ್ ಇವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.