ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಪರಂಜಿ 2.0 ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

0
303

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ :ಎಪ್ರಿಲ್ 19ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಚಿಣ್ಣರ ಬೇಸಿಗೆ ಶಿಬಿರ ಅಪರಂಜಿ 2.0 ಸಮಾರೋಪ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು ವಿದ್ಯಾರ್ಥಿಗಳು ನಾಲ್ಕು ಗೋಡೆಯ ಮಧ್ಯೆ ಶಿಕ್ಷಣ ಕಲಿಯುವುದರ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಾಗಲು ಬೇಕಾದ ಅವಕಾಶ ಮತ್ತು ವೇದಿಕೆಯನ್ನು ಈ ಸಂಸ್ಥೆಯು ನೀಡುತ್ತಿದೆ. ಅಪರಂಜಿ 2.0 ಸಂಪನ್ನವಾಗಲು ಸಂಸ್ಥೆಯ ಪ್ರತಿಯೊಬ್ಬರೂ ಕೂಡ ತಮ್ಮ ಅಮೋಘ ಸೇವೆಯನ್ನ ನೀಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಕುಂದಾಪುರ ಇದರ ಮುಖ್ಯ ವ್ಯವಸ್ಥಾಪಕರಾಗಿರುವ ವಿಷ್ಣುಮೂರ್ತಿ ಉಪಾಧ್ಯಾಯ ಅವರು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸದ ಅನುಕೂಲತೆಯನ್ನು ಒದಗಿಸುವಲ್ಲಿ ಈ ಸಂಸ್ಥೆಯು ಸಹಕಾರಿಯಾಗಿದೆ. ಹಾಗೆಯೇ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರುವಲ್ಲಿ ಸದಾ
ಅವಕಾಶಗಳನ್ನು ನೀಡುತ್ತಾ ಬಂದಿದೆ ಎಂದರು.

ಅತಿಥಿಯಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಶಿರೂರು ಇದರ ಶಾಖಾ ವ್ಯವಸ್ಥಾಪಕರಾದ ರಾಜೇಶ್ ಕಾಮತ್ ಅವರು ಬದಲಾವಣೆ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯ ಸದುಪಯೋಗವಾಗಬೇಕಾದರೆ ಅಪರಂಜಿ ಅಂತಹ ಬೇಸಿಗೆ ಶಿಬಿರ ಅಗತ್ಯವಾಗಿರುತ್ತದೆ. ವಿದ್ಯಾರ್ಥಿಗಳು ಇಲ್ಲಿ ಅನುಭವವನ್ನು ಪಡೆದುಕೊಂಡು ಸಕಾರಾತ್ಮಕ ಚಿಂತನೆಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳುತ್ತಾರೆ. ಹಾಗೆಯೇ ಈ ಸಂಸ್ಥೆಯು ಕುಂದಾಪುರದ ಶಿಕ್ಷಣದ ಕಾಶಿಯಾಗಿ ಬೆಳೆಯುವಂತಾಗಲಿ ಎಂದು ಹಾರೈಸಿದರು.

Click Here

Click Here

ಅತಿಥಿಯಾಗಿ ಆಗಮಿಸಿದ ಸರಿಗಮಪ ಸ್ಪರ್ಧಿಯಾಗಿರುವ ಸವಿಶ್ರೀ ಕೋಣಿ ಕುಂದಾಪುರ ಅವರು ಪ್ರತಿಭೆಗಳಿಗೆ ಸರಿಯಾದ ತರಬೇತಿಯನ್ನು ನೀಡಿ ಅವರು ತಮ್ಮ ಕನಸುಗಳನ್ನು ಸಹಕಾರಗೊಳಿಸಿಕೊಳ್ಳಲು ಈ ಸಂಸ್ಥೆಯು ಅವಿರತವಾಗಿ ಪರಿಶ್ರಮವನ್ನು ಪಡುತ್ತಿದೆ, ಅದಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಹಾರೈಸಿದರು.

ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಂತರಾಷ್ಟ್ರೀಯ ಖ್ಯಾತಿಯ ಸತೀಶ ಹೆಮ್ಮಾಡಿ ಅವರಿಂದ ಜಾದು ಪ್ರದರ್ಶನ, ಜನತಾ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ನ್ಯೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಸಾರಥ್ಯ ದ ಕಲಾ ಶಕ್ತಿ ಕಲಾತಂಡ ಕನ್ನುಕೆರೆ ತೆಕ್ಕಟ್ಟೆ ತಂಡದವರಿಂದ “ಮಕ್ಕಳೊಂದಿಗೆ ನಗೆ ಕೊಪ್ಪರಿಗೆ” ಕಾರ್ಯಕ್ರಮ ನಡೆಯಿತು.

ಈ ಸಮಾರಂಭದಲ್ಲಿ ಬೋಧಕ /ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಸ್ವಾಗತಿಸಿ, ಸಹಶಿಕ್ಷಕರಾದ ಸುಬ್ರಹ್ಮಣ್ಯ ಮರಾಟಿ ವಂದಿಸಿ, ಮಹಾದೇವ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

Click Here

LEAVE A REPLY

Please enter your comment!
Please enter your name here