ನಿಸ್ವಾರ್ಥ ಸೇವಾ ಟ್ರಸ್ಟ್ ನ ಅಶಕ್ತರಿಗೆ ನೆರವು ಮಹಾತ್ಕಾರ್ಯ ಶ್ಲಾಘನೀಯ – ರವೀಂದ್ರ ಕೋಟ

0
576

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಿಸ್ವಾರ್ಥ ಸೇವಾ ಟ್ರಸ್ಟ್ ಹೆಸರಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಬಡ ಹಾಗೂ ಅನಾರೋಗ್ಯ ಪೀಡಿತರ ನೆರವಿಗೆ ಧಾವಿಸುವ ಜೊತೆಗೆ ಯಾವುದೇ ಪ್ರಚಾರದ ಗೀಳು ಇಲ್ಲದೆ ಪ್ರತಿ ತಿಂಗಳು ಸಹಾಯದ ನೆರವು ನೀಡುತ್ತಿದ್ದಾರೆ ಇದೊಂದು ಶ್ರೇಷ್ಠವಾದ ಮಹತ್ಕಾರ್ಯವಾಗಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಪ್ರಶಂಸನೀಯ ಮಾತುಗನ್ನಾಡಿದರು.

ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ತಿಂಗಳ ಸರಣಿ ಸಹಾಯಹಸ್ತ ಯೋಜನೆಯಡಿ ಕೋಟದಲ್ಲಿ ವಾಸ್ತವ್ಯವಿರುವ ಬಡ ಕುಟುಂಬದ ವಿಜಯಲಕ್ಷ್ಮೀ ಶಾಸ್ತ್ರಿ ಇವರಿಗೆ ದಿನಸಿ ಪರಿಕರ ಹಸ್ತಾಂತರಿಸಿ ಮಾತನಾಡಿ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯ ಭಗವಂತನಿಗೆ ಅತಿ ಹತ್ತಿರವಾದ ಕಾರ್ಯವಾಗಿದೆ. ಈ ದಿಸೆಯಲ್ಲಿ ನಿಸ್ವಾರ್ಥ ಸೇವಾ ಟ್ರಸ್ಟ್ ನಂತೆ ಒಂದಿಷ್ಟು ಒಂದಿಷ್ಟು ಸಂಘಟನೆಗಳು ಕಾರ್ಯಾಚರಿಸಲಿ ಎಂದು ಹಾರೈಸಿದರು.

Click Here

Click Here

ಈ ಸಂದರ್ಭದಲ್ಲಿ ಸಮಾಜಸೇವಕಿ ಸವಿತಾ ವೆಂಕಟೇಶ ಉಡುಪ, ನಿಸ್ವಾರ್ಥ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರದೀಪ್ ಶೆಟ್ಟಿ ಕೋಟ, ಕಾರ್ಯದರ್ಶಿ ಪ್ರದೀಪ್ ಪೂಜಾರಿ ಕೋಟ, ಟ್ರಸ್ಟ್ ಪ್ರಮುಖರಾದ ಗೋಪಿನಾಥ್ ಕಿಣಿ ಮತ್ತಿತರರು ಇದ್ದರು.

 

Click Here

LEAVE A REPLY

Please enter your comment!
Please enter your name here