ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀ ಜೈನ ಯಕ್ಷೇ ಪರಿವಾರ ದೇವಸ್ಥಾನ ಗಂಗೆಬೈಲು ಇದರ ವಾರ್ಷಿಕ ವರ್ಧಂತ್ಯೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.
ಒಂಭತ್ತನೆಯ ವರ್ಷದ ವರ್ಧಂತಿ ಉತ್ಸವ ಪ್ರಯುಕ್ತ ಶ್ರೀ ದೇವರಿಗೆ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯ- ಹವಾಚನ, ನವ ಕುಂಭ ಕಲಶರಾಧನೆ, ಪ್ರಧಾನ ಹೋಮ ಕಲಶಾಭಿಷೇಕ, ಮಹಾಮಂಗಳಾರತಿ, ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ಸಿದ್ದ ಸಮಾಜ ಯೋಗ ಕೇಶವ ಆಚಾರ್ಯ ಬೆಳ್ನಿ, ಬಿಜೆಪಿ ಬೈಂದೂರು ನಿಕಟಪೂರ್ವ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ, ಸುರೇಶ ಮೊಗವೀರ, ಅನುರ ಮೆಂಡನ್, ಮಂಜುನಾಥ್ ಖಾರ್ವಿ, ಕೃಷ್ಣ ಮೊಗವೀರ ಉಪಸ್ಥಿತರಿದ್ದರು.
ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಯೋಗಪಟು ಧ್ವನಿ ಮರವಂತೆಯವರನ್ನು ಸನ್ಮಾನಿಸಲಾಯಿತು. ಹಾಸ್ಯಮಯ ನಗೆ ನಾಟಕ “ಕಣ್ಣಾ ಮುಚ್ಚಾಲೆ” ಪ್ರದರ್ಶನಗೊಂಡಿತು.