ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿದ್ದಲ್ಲ್ದೇ ಪೊಲೀಸರ ಮುಂದೆಯೇ ಹಲ್ಲೆಗೆ ಮುಂದಾಗಿದ್ದರೂ ಪೊಲೀಸ್ ಇಲಾಖೆ, ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಕಿರಣ್ ಪೂಜಾರಿ ಸೋಮವಾರ ಮಿನಿ ವಿಧಾನ ಸೌಧದ ಎದುರಿಗೆ ಸಾಂಕೇತಿಕ ಆರೆಬೆತ್ತಲೆ ಧರಣಿ ನಡೆಸಿದ್ದಾರೆ.
ಪೊಲೀಸರು, ವಕೀಲರು, ಮತ್ತು ಗ್ರಾ.ಪಂ.ಅಧಿಕಾರಿಗಳು ಕಿರುಕುಳ ನೀಡಿದ್ದಾರೆಂದು ಅವರು ಪ್ರತಿಭಟನೆಯ ಸಂದರ್ಭ ಆಕ್ರೋಶ ಹೊರಹಾಕಿದ್ದಾರೆ. ಇಂದಿಗೂ ಹೊಸೂರು, ಇಡೂರ್, ಕುಕ್ಕಡ, ಜಾನ್ನಲನಲ್ಲಿ ಬಿಲ್ಲವರಿಗೆ ಬಾವಿ ಮುಟ್ಟಲಿಕೆ, ನೀರು ತೆಗೆಯಲು ಬಿಡದೇ ಅಸ್ಪೃಶ್ಯತೆ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸೂರು ಗ್ರಾಮದಲ್ಲಿ ಸ್ಮಶಾನಕ್ಕೆಂದು ಮೀಸಲಿಟ್ಟ ಸರ್ಕಾರೀ ಜಮೀನು ಒತ್ತುವರಿ ಮಾಡಿ ಮನೆ ಕಟ್ಟಿದ್ದಲ್ಲದೇ ದಲಿತ ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿ, ದಲಿತ ಮಹಿಳೆಯರು ನೀಡಿದ ದೂರನ್ನು ಸ್ವೀಕರಿಸದೇ ದೌರ್ಜನ್ಯ ಮಾಡಲಾಗಿದೆ ಎಂದು ಆರೋಪಿಸಿದರು. ಕರ್ತವ್ಯ ಲೋಪ ಮಾಡಿದ ನ್ಯಾಯವಾದಿಯನ್ನು ಬಾರ್ ಕೌನ್ಸಿಲ್ನಿಂದ ಅಮಾನತು ಮಾಡಬೇಕು ಹಾಗು ಬಿಲ್ಲವ, ದಲಿತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, DYSP ಕುಲಕರ್ಣಿ, ಸಬ್ ಇನ್ಸ್ಪೆಕ್ಟರ್ ನಂಜಪ್ಪ ಭೇಟಿ ನೀಡಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.