ಕುಂದಾಪುರ ಮಿರರ್ ಸುದ್ದಿ…
ಕೋಟ: ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯ ಸದ್ಭಳಕೆ ಮಾಡಿದರೆ ನೈಜ ನೆಲೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಹಾಗೂ ಕೌಶಲ್ಯಾಭಿವೃದ್ಧಿ ಈ ದಿನದ ತುರ್ತು ಅವಶ್ಯಕತೆ ಎಂದು ಡಾ: ಎನ್ ಆರ್. ಆಚಾರ್ಯ ಆಸ್ಪತ್ರೆ, ಕೋಟೇಶ್ವರ ಇದರ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಆಚಾರ್ಯ ನುಡಿದರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಆಧ್ಯಯನ ಕೇಂದ್ರ, ಕುಂದಾಪುರ ಇಲ್ಲಿ ಕೌಶಲ್ಯ ಆಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಉಡುಪಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಹಾಗು ಲಿಪಿ ಇನ್ಪಾರ್‍ಮೆಟಿಕ್ಸ್ ಸ್ಕಿಲ್ ಡೆವಲಪ್‍ಮೆಂಟ್ ತರಬೇತಿ ಸಂಸ್ಥೆ ಕುಂದಾಪುರ ಇವುಗಳ ಸಹಬಾಗಿತ್ವದಲ್ಲಿ ಪದವಿ ವಿದ್ಯಾರ್ಥಿಗಳಿಗೆ ನಡೆದ ‘ಆರೋಗ್ಯ ವಲಯದಲ್ಲಿ ಕೋವಿಡ್ ಕ್ಯ್ರಾಶ್ ಕೋರ್ಸ’ನ್ನು ಉದ್ಘಾಟಿಸಿ ಮಾತನಾಡಿದರು. ಅವರು ಇದೇ ಸಂದರ್ಭದಲ್ಲಿ ನಮ್ಮ ನಡವಳಿಕೆ ಮತ್ತು ರೋಗದ ಬಗೆಗಿನ ಜಾÐನವು ಯಾವುದೇ ರೋಗ ತಡೆಗಟ್ಟುವಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿಯು ತನ್ನಲ್ಲಿ ಸುಪ್ತವಾಗಿ ಅಡಗಿರುವ ಕೌಶಲ್ಯಗಳನ್ನು ಗುರುತಿಸಿಕೊಂಡು ಅದಕ್ಕೆ ಇನ್ನಷ್ಟು ರೂಪ ಕೊಟ್ಟು ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹಿತ ನುಡಿದರು.
ಕಾರ್ಯಕ್ರಮದಲ್ಲಿ ಲಿಪಿ ಇನ್ಪಾರ್‍ಮೆಟಿಕ್ಸ್ ಸ್ಕಿಲ್ ಡೆವಲಪ್‍ಮೆಂಟ್ ತರಬೇತಿ ಸಂಸ್ಥೆಯ ಸುಬ್ರಮಣ್ಯ ಎಸ್. ಈ ತರಬೇತಿಯ ಪ್ರಾಮುಖ್ಯತೆಯನ್ನು ತಮ್ಮ ಪ್ರಸ್ತಾವಿಕ ಮಾತುಗಳಲ್ಲಿ ತಿಳಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ನಾಗರಾಜ ಯು., ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಕಾರ್ಯಕ್ರಮಾಧಿಕಾರಿ ಸಂತೋಷ ನಾಯ್ಕ ಹೆಚ್ ಹಾಗು ಡಾ. ಗೀತಾ ಎಂ. ಉಪಸ್ಥಿತರಿದ್ದರು. ಕುಮಾರಿ ಸೌಜನ್ಯ ದನ್ಯವಾದ ಸಮರ್ಪಿಸಿದರು. ಸುಚಿತ್ರ ಮತ್ತು ತಂಡದವರು ಪ್ರಾರ್ಥಿಸಿದರು.